ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ವಿಮಾನದಿಂದ ಉಪಗ್ರಹ ಉಡಾವಣೆ ವ್ಯವಸ್ಥೆ ಅಭಿವೃದ್ಧಿಗೆ ಚೀನಾ ಮುಂದು

ಉಪಗ್ರಹಗಳನ್ನು ಹೊತ್ತೊಯ್ಯುವ ರಾಕೆಟ್ ನ್ನು ವಿಮಾನಗಳಿಂದ ಉಡಾವಣೆ ಮಾಡುವ ವ್ಯವಸ್ಥೆಯನ್ನು ಚೀನಾ ಅಭಿವೃದ್ಧಿಪಡಿಸಲಿದೆ ಎಂದು ಅಲ್ಲಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಮಾನದಿಂದ ಉಪಗ್ರಹ ಉಡಾವಣೆ ವ್ಯವಸ್ಥೆ ಅಭಿವೃದ್ಧಿಪಡಿಸಲಿರುವ ಚೀನಾ
Srinivas Rao BV
Updated On : 7 Mar 2017, 12:12 pm
ಬೀಜಿಂಗ್: ಉಪಗ್ರಹಗಳನ್ನು ಹೊತ್ತೊಯ್ಯುವ ರಾಕೆಟ್ ನ್ನು ವಿಮಾನಗಳಿಂದ ಉಡಾವಣೆ ಮಾಡುವ ವ್ಯವಸ್ಥೆಯನ್ನು ಚೀನಾ ಅಭಿವೃದ್ಧಿಪಡಿಸಲಿದೆ ಎಂದು ಅಲ್ಲಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
ವಿಮಾನಗಳಿಂದ ರಾಕೆಟ್ ಗಳನ್ನು ಉಡಾವಣೆ ಮಾಡುವ ವ್ಯವಸ್ಥೆಯಿಂದ ನಿಷ್ಕ್ರಿಯ ಉಪಗ್ರಹಗಳನ್ನು ತ್ವರಿತವಾಗಿ ಬದಲಾವಣೆ ಮಾಡಲು ಸಾಧ್ಯವಿದೆ. ಜೊತೆಗೆ ವಿಪತ್ತು ನಿರ್ವಹಣೆಯ ಸಂದರ್ಭಗಳಲ್ಲಿ ಭೂ ವೀಕ್ಷಣೆಯ ಉಪಗ್ರಹಗಳು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯವಾಗಲಿದೆ ಎಂದು ಚೀನಾದ ಉಡಾವಣಾ ವಾಹನ ತಂತ್ರಜ್ಞಾನದ ಅಕಾಡೆಮಿಯ ಅಧಿಕಾರಿ ತಿಳಿಸಿದ್ದಾರೆ. 
ಅಕಾಡೆಮಿಯಲ್ಲಿರುವ ಇಂಜಿನಿಯರ್ ಗಳು ಕೆಳಮಟ್ಟದ ಭೂಕಕ್ಷೆಗೆ ಕಳಿಸಬಹುದಾಅದ 100 ಕೆಜಿ ಪೇಲೋಡ್ ನ ಮಾದರಿಯ ವಿನ್ಯಾಸವನ್ನು ಅಭಿವೃದ್ಧಿಪಡಿಸಿದ್ದಾರೆ. 200 ಕೆಜಿಯಷ್ಟು ತೂಕವನ್ನು ಹೊತ್ತೊಯ್ಯಬಲ್ಲ ದೊಡ್ಡ ರಾಕೆಟ್ ನ್ನು ವಿನ್ಯಾಸಕ್ಕಾಗಿ ಇಂಜಿನಿಯರ್ ಗಳು ಯೋಜನೆ ರೂಪಿಸಿದ್ದಾರೆ.  ಈ ರಾಕೆಟ್ ಗಳನ್ನು ಉಡಾವಣೆ ಮಾಡಲು Y-20 ಕಾರ್ಯತಂತ್ರದ ಸಾರಿಗೆ ವಿಮಾನವನ್ನು ಬಳಕೆ ಮಾಡಲಾಗುತ್ತದೆ ಎಂದು ಅಕಾಡೆಮಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ. 

Advertisement

Advertisement

200 ಮೆಟ್ರಿಕ್ ಟನ್ ಗಳಷ್ಟು ತೂಕ, 66 ಟನ್ ಗಳಷ್ಟು ಪೇಲೋಡ್ ನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ Y-20 ಕಾರ್ಯತಂತ್ರದ ಸಾರಿಗೆ ವಿಮಾನವನ್ನು ದೇಶೀಯವಾಗಿ ನಿರ್ಮಿಸಲಾಗಿದ್ದು, ಜುಲೈ ನಿಂದ ಚೀನಾ ವಾಯುಪಡೆಗೆ ಪೂರೈಕೆ ಮಾಡಲಾಗುವುದನ್ನು ಪ್ರಾರಂಭಿಸಲಾಗಿದೆ. ಭೂಕಕ್ಷೆಯಿಂದ ಉಡಾವಣೆ ಮಾಡಲಾಗುವ ದ್ರವ ಇಂಧನ ಆಧಾರಿತ ರಾಕೆಟ್ ಗಳಿಗಿಂತ ವೇಗವಾಗಿ ಈ ವಿಮಾಗಳಲ್ಲಿ ಘನ ಇಂಧನ ಬಳಸಲಾಗುವ ರಾಕೆಟ್ ಗಳನ್ನು ಉಡಾವಣೆ ಮಾಡಬಹುದಾಗಿದೆ. Y-20 ವಿಮಾನಗಳಿಂದ 200 ಕೆಜಿಯಷ್ಟು ತೂಕದ ಉಪಗ್ರಹಗಳನ್ನು ಭೂಮಿಯಿಂದ 700 ಕಿಮಿ ಮೇಲೆ ಸೂರ್ಯನ ಸಮಕಾಲಿಕ ಕಕ್ಷೆಗೆ ಕಳಿಸಬಹುದಾಗಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement