ವಿದೇಶ

ಎಫ್ ಬಿಐ ನಿರ್ದೇಶಕನರನ್ನು ವಜಾಗೊಳಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್

Srinivas Rao BV
ವಾಷಿಂಗ್ ಟನ್: ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಎಫ್ ಬಿಐ) ನಿರ್ದೇಶಕ ಜೇಮ್ಸ್ ಕಾಮಿ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಕಾ ಏಕಿ ವಜಾಗೊಳಿಸಿದ್ದಾರೆ. 
ಹಲವು ಪ್ರಕ್ಷುಬ್ಧ ಘಟನೆಗಳು ನಡೆಯುತ್ತಿದ್ದು, ಸಾರ್ವಜನಿಕ ನಂಬಿಕೆ ಮತ್ತು ವಿಶ್ವಾಸ ಉಳಿಸಿಕೊಳ್ಳುವುದಕ್ಕಾಗಿ ಎಫ್ ಬಿಐ ನಿರ್ದೇಶಕರನ್ನು ವಜಾಗೊಳಿಸಬೇಕಿದೆ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಆದೇಶಕ್ಕೆ ಕಾರಣ ನೀಡಿದ್ದಾರೆ. ಎಫ್ ಬಿಐ ಅಮೆರಿಕದ ಅತ್ಯಂತ ಪ್ರತಿಷ್ಠಿತ, ಗೌರವಾನ್ವಿತ ಸಂಸ್ಥೆಯಾಗಿದ್ದು, ಇಂದಿನಿಂದ ಹೊಸ ಆರಂಭ ಕಾಣಲಿದೆ ಎಂದು ಟ್ರಂಪ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
ಜೇಮ್ಸ್ ಕಾಮಿ ಅವರನ್ನು ವಜಾಗೊಳಿಸಿದ ಬೆನ್ನಲ್ಲೇ ಹೊಸ ಎಫ್ ಬಿಐ ನಿರ್ದೇಶಕರಿಗಾಗಿ ಹುಡುಕಾಟ ಪ್ರಾರಂಭವಾಗಿದೆ ಎಂದು ಶ್ವೇತ ಭವನ ತಿಳಿಸಿದೆ. 2013 ರಲ್ಲಿ ಬರಾಕ್ ಒಬಾಮ ಅವರು ಜೇಮ್ಸ್ ಕಾಮಿ ಅವರನ್ನು 10 ವರ್ಷಗಳ ವರೆಗೆ ಎಫ್ ಬಿಐ ನಿರ್ದೇಶಕರನ್ನಾಗಿ ನೇಮಿಸಿದ್ದರು. 
SCROLL FOR NEXT