ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಭಾರತದೊಂದಿಗೆ ಬಾಂಧವ್ಯ ಹಾಳುಮಾಡಿಕೊಂಡ ಪಾಕಿಸ್ತಾನಕ್ಕೆ ಅಮೆರಿಕ ತರಾಟೆ

ಭಯೋತ್ಪಾದನೆ ನಿಗ್ರಹ ಹಾಗೂ ಪಠಾಣ್ ಕೋಟ್ ದಾಳಿಯ ವಿಚಾರಣೆಯಲ್ಲಿ ಸಹಕಾರ ನೀಡದೇ ಭಾರತದೊಂದಿಗಿನ ಬಾಂಧವ್ಯವನ್ನು ಹದಗೆಡಿಸಿಕೊಳ್ಳುತ್ತಿರುವ ಪಾಕಿಸ್ತಾನವನ್ನು ಅಮೆರಿಕಾ ತರಾಟೆ...

ಅಮೆರಿಕ
Srinivas Rao BV
Updated On : 12 May 2017, 3:52 am
ವಾಷಿಂಗ್ ಟನ್: ಭಯೋತ್ಪಾದನೆ ನಿಗ್ರಹ ಹಾಗೂ ಪಠಾಣ್ ಕೋಟ್ ದಾಳಿಯ ವಿಚಾರಣೆಯಲ್ಲಿ ಸಹಕಾರ ನೀಡದೇ ಭಾರತದೊಂದಿಗಿನ ಬಾಂಧವ್ಯವನ್ನು ಹದಗೆಡಿಸಿಕೊಳ್ಳುತ್ತಿರುವ ಪಾಕಿಸ್ತಾನವನ್ನು ಅಮೆರಿಕಾ ತರಾಟೆಗೆ ತೆಗೆದುಕೊಂಡಿದೆ. 
ಭಾರತದ ಮೇಲೆ ಪಾಕಿಸ್ತಾನ ಇನ್ನೊಂದೇ ಒಂದು ಭಯೋತ್ಪಾದಕ ದಾಳಿ ನಡೆಸಿದರೂ ಎರಡು ಅಣ್ವಸ್ತ್ರ ರಾಷ್ಟ್ರಗಳ ನಡುವಿನ ಪ್ರಕ್ಷುಬ್ಧ ವಾತಾವರಣ ವಿಷಮ ಸ್ಥಿತಿಯನ್ನು ತಲುಪಲಿದೆ ಎಂದು ಅಮೆರಿಕಾದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕ ಡೇನಿಯಲ್ ಆರ್ ಕೋಟ್ಸ್ ಎಚ್ಚರಿಸಿದ್ದಾರೆ. 
ಭಯೋತ್ಪಾದನೆ ನಿರ್ಮೂಲನೆ ವಿಷಯದಿಂದ ಹಿಡಿದು, 2016 ರ ಪಠಾಣ್ ಕೋಟ್ ನಲ್ಲಿ ಪಾಕ್ ಭಯೋತ್ಪಾದಕರು ದಾಳಿ ನಡೆಸಿದ ಪ್ರಕರಣದ ವರೆಗೂ ಪಾಕಿಸ್ತಾನ ಭಾರತಕ್ಕೆ ಸಹಕಾರ ನೀಡುತ್ತಿಲ್ಲ. ಇದೇ ದ್ವಿಪಕ್ಷೀಯ ಸಂಬಂಧ ಹದಗೆಡಲು ಕಾರಣವಾಗಿದೆ. ಇದು ಹೀಗೆ ಮುಂದುವರೆದರೆ ಭಾರತ ತಾಳ್ಮೆ ಕಳೆದುಕೊಳ್ಳಲಿದ್ದು, ಎರಡು ಅಣ್ವಸ್ತ್ರ ರಾಷ್ಟ್ರಗಳ ನಡುವೆ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕೋಟ್ಸ್ ಎಚ್ಚರಿಸಿದ್ದಾರೆ. 

Advertisement

Advertisement

ಮುಂದುವರೆದು ಮಾತನಾಡಿರುವ ಅವರು, ಪಾಕಿಸ್ತಾನದ ನಡೆ ಇದೇ ರೀತಿ ಮುಂದುವರೆದಿದ್ದೇ ಆದರೆ ಭಾರತ-ಅಫ್ಘಾನಿಸ್ತಾನ ಪ್ರದೇಶದಲ್ಲಿ ಆತಂಕಕಾರಿ ಸ್ಥಿತಿ ಮುಂದುವರೆಯಲಿದ್ದು ಅಮೆರಿಕಾ ಹಿತಾಸಕ್ತಿಗೂ ಪೆಟ್ಟು ಬೀಳಲಿದೆ ಎಂದು ಕೋಟ್ಸ್ ಆತಂಕ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement