ಸಂಗ್ರಹ ಚಿತ್ರ 
ವಿದೇಶ

ಭವಿಷ್ಯದಲ್ಲಿ ಒಬೋರ್ ಗೆ ಕೈ ಜೋಡಿಸಿದರೂ ಭಾರತಕ್ಕೆ ಮಹತ್ವದ ಪಾತ್ರ ಇಲ್ಲ: ಚೀನಾ

ಪಾಕಿಸ್ತಾನ ಮತ್ತು ಚೀನಾ ಎಕನಾಮಿಕ್ ಕಾರಿಡಾರ್ ಯೋಜನೆ ಅಥವಾ ಒನ್ ಬೆಲ್ಟ್ ಒನ್ ಯೋಜನೆಗೆ ಭವಿಷ್ಯದಲ್ಲಿ ಭಾರತ ಕೈ ಜೋಡಿಸಿದರೂ ಅದರ ಪಾತ್ರ ನಿರ್ಣಾಯಕವಾಗಿರುವುದಿಲ್ಲ ಎಂದು ಚೀನಾ ಹೇಳಿದೆ.

ನವದೆಹಲಿ: ಪಾಕಿಸ್ತಾನ ಮತ್ತು ಚೀನಾ ಎಕನಾಮಿಕ್ ಕಾರಿಡಾರ್ ಯೋಜನೆ ಅಥವಾ ಒನ್ ಬೆಲ್ಟ್ ಒನ್ ಯೋಜನೆಗೆ ಭವಿಷ್ಯದಲ್ಲಿ ಭಾರತ ಕೈ ಜೋಡಿಸಿದರೂ ಅದರ ಪಾತ್ರ ನಿರ್ಣಾಯಕವಾಗಿರುವುದಿಲ್ಲ ಎಂದು ಚೀನಾ ಹೇಳಿದೆ.

ಚೀನಾ ರಾಜಧಾನಿ ಬೀಜಿಂಗ್ ನನ್ನಿ ನಿನ್ನೆ ಆರಂಭವಾದ ಒಬೋರ್ ಶೃಂಗಸಭೆಗೆ ಭಾರತ ಗೈರು ಹಾಜರಾಗಿದ್ದು, ಶೃಂಗಸಭೆಯನ್ನು ಬಹಿಷ್ಕರಿಸಿತ್ತು. ಭಾರತ ಸರ್ಕಾರದ ನಡೆ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಚೀನಾ, ಬಹು  ಉದ್ದೇಶಿತ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಭಾರತ ಕೈಜೋಡಿಸಿದರೂ ಅದರ ಪಾತ್ರ ಪ್ರಮುಖವಾಗಿಯೇನೂ ಇರುವುದಿಲ್ಲ. ಈ ಮಹತ್ವದ ಯೋಜನೆಯಲ್ಲಿ ಭಾರತ ಸಣ್ಣ ಪಾತ್ರ ನಿಭಾಯಿಸಬಹುದು ಎಂದು ಕಿಡಿಕಾರಿದೆ.

ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ನಲ್ಲಿ ಒಬೋರ್ ಶೃಂಗಸಭೆಯನ್ನು ಬಹಿಷ್ಕರಿಸಿರುವ ಭಾರತ ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಲಾಗಿದ್ದು, ಬಹು ಉದ್ದೇಶಿತ ಈ ಯೋಜನೆಗೆ ನೆರೆ ದೇಶಗಳು  ಸೇರ್ಪಡೆಯಾಗುವುದನ್ನು ತಡೆಯಲು ಭಾರತಕ್ಕೆ ಸಾಧ್ಯವಿಲ್ಲ. ಭಾರತ ಯೋಜನೆಯನ್ನು ಬಹಿಷ್ಕರಿಸಿದ ಮಾತ್ರಕ್ಕೆ ಯೋಜನೆಯ ಮೇಲೆ ಅಂತಹ ಗಂಭೀರ ಪರಿಣಾಮವೇನೂ ಆಗುವುದಿಲ್ಲ. ಯೋಜನೆಯಲ್ಲಿ ಭಾರತ ಬಹಳ ಸಣ್ಣ  ಪಾತ್ರ ನಿಭಾಯಿಸುತ್ತದೆ ಎಂದು ಹೇಳಿದೆ.

ಏನಿದು ಯೋಜನೆ?

ಚೀನಾದಿಂದ ಯುರೋಪಿನವರೆಗಿನ ಎಲ್ಲ ರಸ್ತೆಗಳು, ರೈಲು ಮಾರ್ಗಗಳು ಬಂದರುಗಳನ್ನು ಸಂಪರ್ಕಿಸುವ ಮೂಲಕ ಮೂಲ ಸವಲತ್ತು ಕಲ್ಪಿಸುವ ಯೋಜನೆಯೇ ಒನ್ ಬೆಲ್ಟ್, ಒನ್ ರೋಡ್... ಶತಕೋಟಿ ಡಾಲರ್ ವೆಚ್ಚದ ಈ  ಯೋಜನೆ ಮೂಲಕ ಭಾರತದ ನೆರೆಹೊರೆ ದೇಶಗಳೂ ಸೇರಿದಂತೆ ಏಷ್ಯಾದಲ್ಲಿ ತನ್ನ ಪ್ರಭಾವವನ್ನು ಗಟ್ಟಿಗೊಳಿಕೊಳ್ಳಲು ಚೀನಾ ಹವಣಿಸುತ್ತಿದೆ. ಈ ಯೋಜನೆ ಮೂಲಕ ಏಷ್ಯಾ ಮತ್ತು ಆಫ್ರಿಕಾ ಮಧ್ಯೆ ಪ್ರಾದೇಶಿಕ ಸಂಪರ್ಕ  ಕಲ್ಪಿಸುವ ಉದ್ದೇಶವನ್ನೂ ಚೀನಾ ಹೊಂದಿದ್ದು, ತನ್ನ ‘ಸಿಲ್ಕ್ ರೋಡ್ ಶೃಂಗ’ಕ್ಕೆ ಅಮೆರಿಕವನ್ನು ಎಳೆದುಕೊಳ್ಳುವಲ್ಲಿ ಚೀನಾ ಕಡೆಗಳಿಗೆಯಲ್ಲಿ ಸಫಲವಾಗಿದೆ. ಅದೇ ರೀತಿ ದಕ್ಷಿಣ ಕೊರಿಯ, ಯುರೋಪಿಯನ್ ಯೂನಿಯನ್ (ಇಯು)  ಮತ್ತು ಜಪಾನನ್ನೂ ಶೃಂಗದಲ್ಲಿ ಪಾಲ್ಗೊಳ್ಳುವಂತೆ ಮನ ಒಲಿಸಿದೆ. ಅಮೆರಿಕದ ಶ್ವೇತ ಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಪೂರ್ವ ಏಷ್ಯಾ ಹಿರಿಯ ನಿರ್ದೇಶಕ ಮ್ಯಾಟ್ ಪೊಟಿಂಗರ್ ಅವರು ಶೃಂಗಸಭೆಯಲ್ಲಿ ಭಾಗವಹಿಸುವ  ನಿಯೋಗದ ನೇತೃತ್ವ ವಹಿಸುವರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಪ್ರಕಟಿಸಿತ್ತು.

ಭಾರತದ ವಿರೋಧವೇಕೆ?
ಚೀನಾದ ಈ ಯೋಜನೆಯ ಭಾಗವಾಗಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ನಿರ್ವಿುಸಲು ಉದ್ದೇಶಿಸಲಾಗಿದೆ. 46 ಶತಕೋಟಿ ಡಾಲರ್ ವೆಚ್ಚದ ಈ ಆರ್ಥಿಕ ಕಾರಿಡಾರ್, ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದು  ಹೋಗುತ್ತದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಪಾಕಿಸ್ತಾನದ ಭಾಗವಲ್ಲ ಎಂದು ಭಾರತ ಸ್ಪಷ್ಟ ಸಂದೇಶ ಸಾರಿದೆ. ಹೀಗಿದ್ದೂ ಚೀನಾ ಯೋಜನೆಗೆ ಮುಂದಾಗಿದ್ದು, ಇದೇ ಕಾರಣಕ್ಕಾಗಿ ಈ ಯೋಜನೆಗೆ ಭಾರತ ಪ್ರಬಲ  ಆಕ್ಷೇಪವನ್ನು ವ್ಯಕ್ತಪಡಿಸಿದೆ. ಇದಲ್ಲದೆ ಪರಮಾಣು ಪೂರೈಕೆದಾರರ ಸಮೂಹಕ್ಕೆ (ಎನ್​ಎಸ್​ಜಿ) ಸೇರುವ ಯತ್ನ, ಭಯೋತ್ಪಾದಕ ಗುಂಪು ಜೈಷ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್​ ಗೆ ವಿಶ್ವಸಂಸ್ಥೆಯಲ್ಲಿ ನಿಷೇಧ  ವಿಧಿಸುವ ಪ್ರಸ್ತಾಪ, ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಸೇರುವ ಯತ್ನಗಳಿಗೆ ವಿರೋಧ ವ್ಯಕ್ತ ಪಡಿಸಿರುವ ಚೀನಾದ ನಿಲುವು ಕೂಡಾ ಭಾರತಕ್ಕೆ ತೀವ್ರ ಕಿರಿಕಿರಿ ಉಂಟು ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!