ವಿದೇಶ

ಒಂದೆ ವಾರದಲ್ಲಿ ಎರಡು ಬಾರಿ ಮೌಂಟ್ ಎವರೆಸ್ಟ್ ಏರಿದ ಭಾರತೀಯ ಮಹಿಳೆ, ದಾಖಲೆ

Lingaraj Badiger
ಕಠ್ಮಂಡು: ಭಾರತೀಯ ಪರ್ವತಾರೋಹಿಯೊಬ್ಬರು ಭಾನುವಾರ ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರುವ ಮೂಲಕ ಒಂದೇ ವಾರದಲ್ಲಿ ಎರಡು ಬಾರಿ ಮೌಂಟ್ ಎವರೆಸ್ಟ್ ಏರಿ ದಾಖಲೆ ನಿರ್ಮಿಸಿದ್ದಾರೆ.
ಒಂದೇ ಋತುವಿನಲ್ಲಿ ಎರಡು ಬಾರಿ ಜಗತ್ತಿನ ಅತಿ ಎತ್ತರದ ಶಿಖರ ಏರುವ ಮೂಲಕ ಭಾರತದ 37 ವರ್ಷದ ಅನ್ಷು ಜಮ್ಸೆನ್ಪಾ ಅವರು ಹೊಸ ದಾಖಲೆ ಮಾಡಿದ್ದಾರೆ ಎಂದು ಅವರ ದಂಡಯಾತ್ರೆಯ ತಂಡ ಹೇಳಿದೆ.
ಅನ್ಷು ಅವರು ಇಂದು ಬೆಳಗ್ಗೆ 8 ಗಂಟೆಗೆ ಎರಡನೇ ಬಾರಿ ಮೌಂಟ್ ಎವರೆಸ್ಟ್ ನ ತುತ್ತ ತುದಿ ತಲುಪುವ ಮೂಲಕ ದಾಖಲೆ ಮಾಡಿದ್ದಾರೆ ಎಂದು ಡ್ರೀಮ್ ಹಿಮಾಲಯ ಅಡ್ವೆಂಚರ್ಸ್.ದವಲ್ ಲಾಮಾ ಅವರು ತಿಳಿಸಿದ್ದಾರೆ.
ಇಬ್ಬರ ಮಕ್ಕಳ ತಾಯಿಯಾಗಿರುವ ಅನ್ಷು ಅವರು ಮೇ 16ರಂದು 8,850 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಪರ್ವತ ಶಿಖರ ಏರುವ ಮುನ್ನ ಟಿಬೆಟಿಯನ್ ಧಾರ್ಮಿಕ ಗುರು ದಲೈ ಲಾಮಾ ಅವರ ಆರ್ಶೀವಾದ ಪಡೆದಿದ್ದರು.
ಅನ್ಷು ಅವರು ಒಟ್ಟು ಐದು ಬಾರಿ ಮೌಂಟ್ ಎವರೆಸ್ಟ್ ಏರಿದ್ದಾರೆ. 
SCROLL FOR NEXT