ಶೂಟೌಟ್ ನಡೆದ ವಾಲ್ ಮಾರ್ಟ್ ಸ್ಥಳ
ವಾಷಿಂಗ್ಟನ್: ನ್ಯೂಯಾರ್ಕ್ ವಾಣಿಜ್ಯ ಗೋಪುರ ಮೇಲಿನ ದಾಳಿ ಬೆನ್ನಲ್ಲೇ ಅಮೆರಿಕದಲ್ಲಿ ಮತ್ತೊಂದು ಶೂಟೌಟ್ ಪ್ರಕರಣ ದಾಖಲಾಗಿದ್ದು, ಡೆನ್ವರ್ ನ ವಾಲ್ ಮಾರ್ಟ್ ಮಾಲ್ ನಲ್ಲಿ ದುಷ್ಕರ್ಮಿಯೋರ್ವ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ.
ಅಮೆರಿಕದ ಕೊಲಾರಾಡೋದ ಡೆನ್ವರ್ ನ ಥಾರ್ನ್ಟನ್ ನ ಗ್ರ್ಯಾಂಟ್ ಸ್ಟ್ರೀಟ್ ನಲ್ಲಿರುವ ವಾಲ್ ಮಾರ್ಟ್ನಲ್ಲಿ ಬುಧವಾರ ರಾತ್ರಿ ಆಗಂತುಕನೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಮೂಲಗಳ ಪ್ರಕಾರ ಘಟನೆಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಇನ್ನು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಿನ್ನೆಯಷ್ಟೇ ನ್ಯೂಯಾರ್ಕ್ನ ಮ್ಯಾನ್ ಹಟನ್ನಲ್ಲಿ ಉಗ್ರನೋರ್ವ ಜನರ ಮೇಲೆ ಟ್ರಕ್ ಹರಿಸಿದ್ದ. ಈ ಘಟನೆಯಲ್ಲಿ 8 ಜನರು ಮೃತಪಟ್ಟಿದ್ದರೆ, 11 ಜನರು ಗಾಯಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics