ಸ್ಮಶಾನದಿಂದ ದೂರ ಉಳಿಯುವಂತೆ ಡ್ಯಾನ್ಸಿಂಗ್ ಆಂಟಿಗಳಿಗೆ ಚೀನಾ ಸೂಚನೆ
ಸ್ಮಶಾನದಿಂದ ದೂರ ಉಳಿಯುವಂತೆ ಡ್ಯಾನ್ಸಿಂಗ್ ಆಂಟಿಗಳಿಗೆ ಚೀನಾದ ಸರ್ಕಾರ ಸೂಚನೆ ನೀಡಿದೆ.
ಬೀಜಿಂಗ್: ಸ್ಮಶಾನದಿಂದ ದೂರ ಉಳಿಯುವಂತೆ ಡ್ಯಾನ್ಸಿಂಗ್ ಆಂಟಿಗಳಿಗೆ ಚೀನಾದ ಸರ್ಕಾರ ಸೂಚನೆ ನೀಡಿದೆ.
ಸಾರ್ವಜನಿಕ ವೇದಿಕೆಗಳಲ್ಲಿ ನೃತ್ಯ ಮಾಡುವವರು ಸ್ಮಶಾನದಲ್ಲಿ ಮೂಢನಂಬಿಕೆಗೆ ಉತ್ತೇಜನ ನೀಡದಂತೆ ಚೀನಾ ಸ್ಪಷ್ಟ ಸೂಚನೆ ರವಾನಿಸಿದೆ. ನೃತ್ಯ ಮಾಡುವ ಮಹಿಳೆಯರು ಚೀನಾದ ಹಳೆಯ ಹಾಡುಗಳನ್ನು ಪ್ರಸಾರ ಮಾಡಲಿವೆ. ನೃತ್ಯ ಮಾಡುವ ಮಹಿಳೆಯರು ಸ್ಮಶಾನದಿಂದ ದೂರವಿರಬೇಕೆಂಬ ನಿಯಮವನ್ನು ನ.13 ರಿಂದ ಜಾರಿಗೆ ತರಲಾಗಿದ್ದು, ಹುತಾತ್ಮರ ಅಂತ್ಯಸಂಸ್ಕಾರ ನಡೆಸುವ ಸ್ಥಳಗಳಲ್ಲಿ ಇರಬಾರದು ಹಾಗೂ ಅಕ್ರಮವಾಗಿ ಹಣ ಸಂಪಾದನೆ ಮಾಡಲು ಮೂಢನಂಬಿಕೆಗಳನ್ನು ಉತ್ತೇಜಿಸಬರದು ಎಂದು ಹೊಸ ನಿಯಮಗಳು ತಿಳಿಸಿವೆ.
ನೃತ್ಯ ಮಾಡುವವರು ಈ ರೀತಿಯ ಕೃತ್ಯಗಳಲ್ಲಿ ತೊಡಗುವುದಕ್ಕಿಂತ ಸೌಹಾರ್ದಯುತ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಚೀನಾದ ಪ್ರಧಾನ ಕ್ರೀಡಾ ಆಡಾಳಿತ ಇಲಾಖೆ ಹೇಳಿದೆ. ಚೀನಾದಲ್ಲಿ 60 ವರ್ಷಕ್ಕಿಂತ ಹೆಚ್ಚಾದವರು ವಯಸ್ಸಾಗುವುದು ಹಾಗೂ ಏಕಾಂತದಿಂದ ಹೊರಬರಲು ಈ ರೀತಿಯಾದ ನೃತ್ಯಗಳಲ್ಲಿ ತೊಡಗುವ ಅಭ್ಯಾಸ ಹೊಂದಿದ್ದಾರೆ.