ಡೆಲ್ಫ್ಟ್ ದ್ವೀಪ: ಡೆಲ್ಫ್ಟ್ ದ್ವೀಪದ ಬಳಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆದು ಆರೋಪಿಸಿ ತಮಿಳುನಾಡು ಮೂಲದ ನಾಲ್ವರು ಮೀನುಗಾರರರನ್ನು ಶ್ರೀಲಂಕಾ ನೌಕಾಪಡೆ ಶನಿವಾರ ಬಂಧನಕ್ಕೊಳಪಡಿಸಿದೆ ಎಂದು ತಿಳಿದುಬಂದಿದೆ.
ಬಂಧನಕ್ಕೊಳಗಾಗಿರುವ ನಾಲ್ವರು ಮೀನುಗಾರರನ್ನು ಕಂಕೆಸಂತುರೈ ನೌಕಾ ಕ್ಯಾಂಪ್ ಬಳಿ ಕರೆದುಕೊಂಡು ಹೋಗಿರುವ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆಂದು ವರದಿಗಳು ತಿಳಿಸಿವೆ.
ನಿನ್ನೆಯಷ್ಟೇ ಶ್ರೀಲಂಕಾ ನೌಕಾಪಡೆ 10 ತಮಿಳುನಾಡು ಮೀನುಗಾರರನ್ನು ಬಂಧನಕ್ಕೊಳಪಡಿಸಿತ್ತು. ಬಂಧನದ ವೇಳೆ 1 ದೋಣಿಯನ್ನು ವಶಕ್ಕೆ ಪಡೆದುಕೊಂಡಿತ್ತು.