ಇಸ್ಲಾಮಾಬಾದ್: ಇಸ್ಲಾಮಾಬಾದ್ ತಲುಪುವ ಮುಖ್ಯ ಹೆದ್ದಾರಿಯನ್ನು ತಮ್ಮ ಹಿಡಿತದಲ್ಲಿ ಇರಿಸಿಕೊಂಡಿದ್ದ ಇಸ್ಲಾಮಿಕ್ ಪ್ರತಿಭಟನಾಕಾರರನ್ನು ತೆರವುಗೊಳಿಸುವಾಗ ಪಾಕಿಸ್ತಾನದ ಓರ್ವ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು 150ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.
ಮಾಜಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ನಿವಾಸದ ಹೋಗುವಂತಾ ಹಲವು ರಸ್ತೆಗಳಲ್ಲಿ ಭದ್ರತಾ ಸಿಬ್ಬಂದಿಗಳು ಜಮಾಯಿಸಿದ್ದು ಭದ್ರತೆ ನೀಡುತ್ತಿದ್ದಾರೆ. ತೆಹ್ರೇಕ್ ಇ ಖತಂ ಇ ನಬೂವ್ವತ್, ತೆಹ್ರೇಕ್ ಇ ಲಬೈಕ್ ಯಾ ರಸೂಲ್ ಅಲ್ಲ(ಟಿಎಲ್ವೈಆರ್) ಮತ್ತು ಸುನ್ನಿ ತೆಹ್ರೇಕ್ ಪಾಕಿಸ್ತಾನ(ಎಸ್ಟಿಪಿ) ಇಸ್ಲಾಮಿಕ್ ಸಂಘಟನೆಗಳ 2 ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
2017ರ ಚುನಾವಣಾ ಕಾಯ್ದೆಯಲ್ಲಿ ಪ್ರವಾದಿತ್ವದ ಅಂತಿಮ ಪ್ರಮಾಣಕ್ಕೆ(ಖತಂ-ಇ-ನಬೂವ್ವತ್) ಬದಲಾವಣೆಗಳನ್ನು ಕಳೆದ ಸೆಪ್ಟೆಂಬರ್ ನಲ್ಲಿ ಮಾಡಲಾಗಿತ್ತು. ಈ ಕಾರಣಕ್ಕೆ ಕಾನೂನು ಸಚಿವ ಝಾಹೀದ್ ಹಮೀದ್ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ ಪ್ರಸ್ತುತ ಹೊತ್ತಿ ಉರಿಯುತ್ತಿದೆ. ಇಸ್ಲಾಮಿಕ್ ಪ್ರತಿಭಟನಾಕರರನ್ನು ಚದುರಿಸುವಲ್ಲಿ ಪಾಕ್ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ತೀವ್ರ ಕಾರ್ಯಾಚರಣೆ ಕೈಗೊಂಡಿದ್ದು ಈ ಕಾರಣಕ್ಕೆ ಪಾಕಿಸ್ತಾನದಲ್ಲಿನ ಖಾಸಗಿ ಟಿವಿ ವಾಹಿನಿಗಳು ತಮ್ಮ ಪ್ರಸಾರ ಕಾರ್ಯವನ್ನು ಬಂದ್ ಮಾಡುವಂತೆ ಪಾಕಿಸ್ತಾನ ಸರ್ಕಾರ ಆದೇಶಿಸಿದೆ.
ನಿರ್ಬಂಧದ ಹೊರತಾಗಿಯೂ ಖಾಸಗಿ ಟಿವಿ ಮಾಧ್ಯಮಗಳು ಇಸ್ಲಾಮಿಕ್ ಪ್ರತಿಭಟನಕಾರರ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ನೇರ ಪ್ರಸಾರ ಮಾಡುತ್ತಿರುವ ಕಾರಣ ಅವುಗಳಿಗೆ ಸದ್ಯಕ್ಕೆ ಕಡ್ಡಾಯವಾಗಿ ಪ್ರಸಾರ ಕಾರ್ಯ ನಿಲ್ಲಿಸುವಂತೆ ವಿದ್ಯುನ್ಮಾನ ನಿಯಂತ್ರಣ ಪ್ರಾಧಿಕಾರ ಆದೇಶಿಸಿರುವುದಾಗಿ ವರದಿಯಾಗಿವೆ.
ಇಸ್ಲಾಮಿಕ್ ಪ್ರತಿಭಟನಾಕರರನ್ನು ತೆರವುಗೊಳಿಸುವ ಸಲುವಾಗಿ ಭದ್ರತಾ ಪಡೆಗಳು ಕಾರ್ಯಾಚರಣೆಯಲ್ಲಿ ರಬ್ಬರ್ ಬುಲೆಟ್ ಗಳನ್ನು ಬಳಸಲಾಗಿದ್ದು ಇದು ಪ್ರತಿಭಟನಾಕಾರರಲ್ಲಿ ಆಕ್ರೋಶ ಕಾರಣವಾಗಿದ್ದು ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಕಾರಣವಾಗಿದೆ. ಪ್ರತಿಭಟನಾಕಾರರನ್ನು ತೆರವುಗೊಳಿಸಲು 8 ಸಾವಿರ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪ್ರತಿಭಟನಾಕಾರರನ್ನು ತೆರವುಗೊಳಿಸಿ ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಪಾಕಿಸ್ತಾನ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಸೇನಾ ಮುಖ್ಯಸ್ಥ ಖಮರ್ ಜಾವೆದ್ ಬಾಜ್ವಾ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics