ಬಾಂಗ್ಲಾದೇಶ ರೈಪಲ್ಸ್ ಸೈನಿಕರು 
ವಿದೇಶ

2009 ರ ಬಾಂಗ್ಲಾ ಹಿಂಸಾಚಾರ, ಹತ್ಯೆ ಪ್ರಕರಣ: 139 ಸೈನಿಕರ ಮರಣದಂಡನೆ, 146 ಸೈನಿಕರ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದ ಢಾಕಾ ಹೈಕೋರ್ಟ್

2009 ರ ದಂಗೆಯ ವೇಳೆ ನಡೆದ ಹತ್ಯಾಕಾಂಡ ಪ್ರಕರಣ ಸಂಬಂಧ 139 ಮಂದಿಯ ಮರಣ ದಂಡನೆ, 146 ಜನರಿಗೆ ಜೀವಾವಧಿ ಶಿಕ್ಷೆಯನ್ನು ಬಾಂಗ್ಲಾ ಹೈ ಕೋರ್ಟ್ .......

ದಾಕಾ: 2009 ರ ದಂಗೆಯ ವೇಳೆ ನಡೆದ ಹತ್ಯಾಕಾಂಡ ಪ್ರಕರಣ ಸಂಬಂಧ 139 ಮಂದಿಯ ಮರಣ ದಂಡನೆ, 146 ಜನರಿಗೆ ಜೀವಾವಧಿ ಶಿಕ್ಷೆಯನ್ನು ಬಾಂಗ್ಲಾ ಹೈ ಕೋರ್ಟ್ ಇಂದು ಎತ್ತಿ ಹಿಡಿದಿದೆ. ಗಡಿ ರಕ್ಷಕರ ಪ್ರಧಾನ ಕಚೇರಿಯಲ್ಲಿ ನಡೆದ ಕ್ರೂರ ಹತ್ಯೆಗಾಗಿ ಆಗಿನ ಬಾಂಗ್ಲಾದೇಶ ರೈಫಲ್ಸ್ (ಬಿಡಿಆರ್) ನ 152 ಆರೋಪಿತ ಸೈನಿಕರ ಮರಣದಂಡನೆ ಶಿಕ್ಷೆಗೆ ಸಂಬಂಧಿಸಿ ಬಾಂಗ್ಲಾ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ.
ಮೂರು ನ್ಯಾಯಾಧೀಶರನ್ನೊಳಗೊಂಡ ಪೀಠವು ನೀಡಿದ ಸುದೀರ್ಘ ತೀರ್ಪಿನ ವಿವರವನ್ನು ಅಟಾರ್ನಿ ಜನರಲ್ ಮಹಬುಬೈ ಅಲಾಮ್ ಅವರು ಮಾಧ್ಯಮಗಳಿಗೆ ತಿಳಿಸಿದರು. ಬಿಡಿಆರ್ ನ 152 ಸೈನಿಕರಿಗೆ ಮರಣದಂಡನೆ ಹಾಗು 158 ಮಂದಿಗೆ ಜೀವಾವಧಿ ಶಿಕ್ಷೆ ನಿಡಿ ಢಾಖಾದ ಕೆಳ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದ ನಾಲ್ಕು ವರ್ಷಗಳ ನಂತರ ಈ ತೀರ್ಪು ಹೊರಬಿದ್ದಿದೆ.
ನಿನ್ನೆ ಢಾಕಾ ಹೈ ಕೋರ್ಟ್ ಈ ಪ್ರಕರಣ ಸಂಬಂಧ ಸುದೀರ್ಘ ತೀರ್ಪನ್ನು ಮಂಡಿಸಲು ಮೊದಲು ಮಾಡಿದ್ದು ಇದಕ್ಕೂ ಮುನ್ನ ಢಾಕಾ ದ ಕೆಳ ನ್ಯಾಯಾಲಯವು  152 ಸೈನಿಕರಿಗೆ ಮರಣದಂಡನೆಯನ್ನು ವಿಧಿಸಿ 2013ರಲ್ಲಿ ತೀರ್ಪು ಪ್ರಕಟಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ