ಸಂಗ್ರಹ ಚಿತ್ರ 
ವಿದೇಶ

ಸದ್ದಿಲ್ಲದೇ ವಿಶ್ವದ 'ಸೂಪರ್ ಪವರ್ ದೇಶ'ವಾಗುತ್ತಿರುವ ಚೀನಾ: ಅಮೆರಿಕ ತಜ್ಞರು

ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನೇತೃತ್ವದಲ್ಲಿ ಚೀನಾ ದೇಶ ಸದ್ದಿಲ್ಲದೇ ವಿಶ್ವದ ಸೂಪರ್ ಪವರ್ ದೇಶವಾಗಿ ಹೊರಹೊಮ್ಮುತ್ತಿದೆ ಅಮೆರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಾಷಿಂಗ್ಟನ್: ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನೇತೃತ್ವದಲ್ಲಿ ಚೀನಾ ದೇಶ ಸದ್ದಿಲ್ಲದೇ ವಿಶ್ವದ ಸೂಪರ್ ಪವರ್ ದೇಶವಾಗಿ ಹೊರಹೊಮ್ಮುತ್ತಿದೆ ಅಮೆರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಅಮೆರಿಕದ ವಾಷಿಂಗ್ಟನ್ ಪೋಸ್ಟ್ ನಲ್ಲಿ ಖ್ಯಾತ ಅಂಕಣಕಾರ ಡೇವಿಡ್ ಇಗ್ನೇಷಿಯಸ್ ಅವರು ಬರೆದಿದ್ದು, ಚೀನಾದ ಬಹು ಉದ್ದೇಶಿತ ಪ್ರಮುಖಮಹತ್ವಾಕಾಂಕ್ಷೆಯ ಒನ್ ಬೆಲ್ಟ್ ಒನ್ ರೋಡ್ ಯೋಜನೆಯ ಚಾಲನೆ  ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಅವರ ಭೇಟಿ ಚೀನಾ ವಿಶ್ವದ ಸೂಪರ್ ಪವರ್ ದೇಶವಾಗಿ ಪರಿವರ್ತನೆಯಾಗುತ್ತಿರುವ ಲಕ್ಷಣ ಎಂದು ಹೇಳಿದ್ದಾರೆ.
ಅಂತೆಯೇ ಬೀಜಿಂಗ್ ತಾಳ್ಮೆಯಿಂದ ವಿಶ್ವ ಸಮುದಾಯದೊಂದಿಗೆ ವ್ಯವಹರಿಸುವ ಮೂಲಕ ತನ್ನ ಗುರಿಯತ್ತ ಯಾವುದೇ ಅಡೆತಡೆಗಳಿಲ್ಲದೇ ಸಾಗುತ್ತಿದೆ. ಚೀನಾದ ಈ ಪ್ರಗತಿ ವಿಶ್ವದ ಯಾವುದೇ ರಾಷ್ಟ್ರವನ್ನೂ ತನ್ನ  ಪ್ರಭಾವಕ್ಕೊಳಪಡಿಸಿಕೊಳ್ಳುತ್ತದೆ. ಚೀನಾ ದೇಶದ ಹೊಸ ದೃಷ್ಟಿಕೋನ ಮತ್ತು ಚೀನಾದ ಅಂತಾರಾಷ್ಟ್ರೀಯ ಯೋಜನೆಗಳು ವಿಶ್ವದ ಸೂಪರ್ ಪವರ್ ಆಗಿ ರೂಪುಗೊಳ್ಳುವತ್ತ ಸಾಗಿದೆ. ಈಗಾಗಲೇ ಚೀನಾ ಬಹುತೇಕ ತನ್ನ ಗುರಿ  ಸಾಧಿಸಿದ್ದು, ಒಬೋರ್ ಸೇರಿದಂತೆ ಚೀನಾಗೆ ಜಾಗತಿಕ ಸಂಸ್ಥೆಗಳ ಹೊಸ ಸಂಪರ್ಕ ಜಾಲಗಳ ಅವಶ್ಯಕತೆ ಇದೆಯಷ್ಟೇ.. ಎಂದು ಅವರು ಹೇಳಿದ್ದಾರೆ.
ಅಂತೆಯೇ ಹಾಲಿ ಸೂಪರ್ ಪವರ್ ರಾಷ್ಟ್ರವಾಗಿರುವ ಅಮೆರಿಕ ನೇತೃತ್ವದ ಆದೇಶಗಳನ್ನು ಚೀನಾ ಹೇಗೆ ನಿಯಂತ್ರಿಸಲಿದೆ ಎಂಬುದರ ಮೇಲೆ ಆ ದೇಶದ ಸಾಮರ್ಥ್ಯ ಅಡಗಿದೆ ಎಂದು ಡೇವಿಡ್ ಇಗ್ನೇಷಿಯಸ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ