ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಆಸ್ಟ್ರೇಲಿಯಾ: ಕಾರ್ಮೈಕಲ್ ಕಲ್ಲಿದ್ದಲು ಗಣಿಗಾರಿಕೆ ವಿರೊಧಿಸಿ ಸ್ಟಾಪ್ ಅದಾನಿ ಪ್ರತಿಭಟನೆ

ಆಸ್ಟ್ರೇಲಿಯಾದಲ್ಲಿ ಅದಾನಿ ಸಂಸ್ಥೆಯ ಪ್ರಸ್ತಾವಿತ ಕಾರ್ಮೈಕಲ್ ಕಲ್ಲಿದ್ದಲು ಗಣಿಗಾರಿಕೆ ಯೋಜನೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಕಲ್ಲಿದ್ದಲು ಗಣಿಗಾರಿಕೆಯನ್ನು ವಿರೋಧಿಸಿ ಸ್ಟಾಪ್ ಅದಾನಿ

ಕಾರ್ಮೈಕಲ್ ಕಲ್ಲಿದ್ದಲು ಗಣಿಗಾರಿಕೆಯನ್ನು ವಿರೊಧಿಸಿ ಸ್ಟಾಪ್ ಅದಾನಿ ಪ್ರತಿಭಟನೆ
Srinivas Rao BV
Updated On : 8 Oct 2017, 6:26 am
ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಅದಾನಿ ಸಂಸ್ಥೆಯ ಪ್ರಸ್ತಾವಿತ ಕಾರ್ಮೈಕಲ್ ಕಲ್ಲಿದ್ದಲು ಗಣಿಗಾರಿಕೆ ಯೋಜನೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಕಲ್ಲಿದ್ದಲು ಗಣಿಗಾರಿಕೆಯನ್ನು ವಿರೋಧಿಸಿ ಸ್ಟಾಪ್ ಅದಾನಿ ಪ್ರತಿಭಟನೆ ನಡೆದಿದೆ. 
16.5 ಬಿಲಿಯನ್ ಡಾಲರ್ ಮೊತ್ತದ ಯೋಜನೆಗೆ ಸಿಡ್ನಿ, ಬ್ರಿಸ್ಬ್ರೇನ್, ಮೆಲ್ಬೋರ್ನ್, ನಾರ್ತ್ ಕ್ವೀನ್ಸ್ ಲ್ಯಾಂಡ್ ಸೇರಿದಂತೆ ಹಲವು ಪ್ರದೇಶದಲ್ಲಿ ಸ್ಟಾಪ್ ಅದಾನಿ ಪ್ರತಿಭಟನಾ ರ್ಯಾಲಿಗಳು ನಡೆದಿದಿರುವುದರ ಬಗ್ಗೆ ವರದಿಗಳಾಗಿವೆ. ಗಣಿಗಾರಿಕೆಗೆ ಅನುಮತಿ ನೀಡಿ ಮುಂದುವರೆದರೆ ಅದು ನಮ್ಮನ್ನು ಕೆಟ್ಟ ಭವಿಷ್ಯದತ್ತ ಕೊಂಡೊಯ್ಯುತ್ತದೆ. ಆಸ್ಟ್ರೇಲಿಯಾ ಅತ್ಯುತ್ತಮ ರಾಷ್ಟ್ರ ಎಂದು ಪ್ರತಿಭಟನೆಯ ನೇತೃತ್ವ ವಹಿಸಿ 2,000 ಜನರನ್ನು ಸೇರಿಸಿದ್ದ ವ್ಯಕ್ತಿಯೊಬ್ಬರು ಎಬಿಸಿ ನ್ಯೂಸ್ ಗೆ ಹೇಳಿದ್ದಾರೆ. 
ಎನ್ ಜಿಒಗಳು ಹಾಗೂ ಪರಿಸರವಾದಿಗಳಿಂದ ಪ್ರಾರಂಭವಾದ ಅಭಿಯಾನ ರಾಷ್ಟ್ರವ್ಯಾಪಿ ನಡೆಯುತ್ತಿದ್ದು ಸ್ಟಾಪ್ ಅದಾನಿ ಎಂಬ ಘೋಷ ವಾಕ್ಯವನ್ನು ಕೂಗಿ ಜನರು, ಇನ್ನಷ್ಟೇ ಪರಿಸರ ಇಲಾಖೆಯಿಂದ ಅನುಮತಿ ಸಿಗಬೇಕಿರುವ ಕಲ್ಲಿದ್ದಲು ಗಣಿಗಾರಿಕೆಯನ್ನು ವಿರೋಧಿಸಿದ್ದಾರೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement