ಲಾಹೋರ್: ಮುಂಬೈ ಉಗ್ರ ದಾಳಿ ಮಾಸ್ಟರ್ ಮೈಂಡ್ ಹಾಗೂ ಜಮಾತ್ ಉದ್ ದವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಬಿಡುಗಡೆ ಬಹುತೇಕ ಖಚಿತವಾಗಿದ್ದು, ಹಫೀಜ್ ಸಯ್ಯೀದ್ ವಿರುದ್ಧ ವಿಚಾರಣೆಯನ್ನು ಪಾಕಿಸ್ತಾನ ಸರ್ಕಾರ ಹಿಂದಕ್ಕೆ ಪಡೆದಿದೆ.
ಹಫೀಜ್ ಸಯ್ಯೀದ್ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಇಜಾಜ್ ಅಫ್ಜಲ್ ಖಾನ್ ನೇತೃತ್ವದ ಫೆಡರಲ್ ನ್ಯಾಯಾಂಗ ಪರಿಶೀಲನಾ ಮಂಡಳಿಗೆ ಪಾಕಿಸ್ತಾನ ಪಂಜಾಬ್ ನ ಗೃಹ ಸಚಿವಾಲಯ ಹಫೀಜ್ ಸಯ್ಯೀದ್ ಬಂಧನ ಅಗತ್ಯತೆ ಇಲ್ಲ ಎಂದು ಹೇಳಿದ್ದು, ಹಫೀಜ್ ಸಯ್ಯೀದ್ ಮಾತ್ರವಲ್ಲದೇ ಆತನ ಮೂವರು ಸಹಚರರು ಕೂಡ ಬಿಡುಗಡೆಯಾಗುವ ಸಾಧ್ಯತೆ ಇದೆ. "ಉಗ್ರ ನಿಗ್ರಹ ಕಾರ್ಯಾಚರಣೆ ಸಂಬಂಧ ಈ ಹಿಂದೆ ಗೃಹಬಂಧನದಲ್ಲಿಡಲಾಗಿದ್ದ ಹಫೀಜ್ ಸಯ್ಯೀದ್ ಬಂಧನ ವಿಸ್ತರಣೆ ಅಗತ್ಯವಿಲ್ಲ. ಹೀಗಾಗಿ ಮಂಡಳಿ ಹಫೀಜ್ ಸಯ್ಯೀದ್ ಮತ್ತು ಆಕನ ಸಹಚರರಾದ ಅಬ್ದುಲ್ಲಾ ಉಬಿದ್, ಮಲಿಕ್ ಜಾಫರ್ ಇಕ್ಬಾಲ್, ಅಬ್ದುಲ್ ರೆಹಮಾನ್ ಅಬಿದ್ ಮತ್ತು ಖಜಿ ಕಾಶಿಫ್ ಹುಸೇನ್ ಅವರ ಬಿಡುಗಡೆಗೆ ನಿರ್ದೇಶನ ನೀಡಬೇಕು ಎಂದು ಸಚಿವಾಲಯ ಮನವಿ ಮಾಡಿದೆ.
ಪಂಜಾಬ್ ಸರ್ಕಾರದ ಮನವಿ ಮೇರೆಗೆ ಫೆಡರಲ್ ನ್ಯಾಯಾಂಗ ಪರಿಶೀಲನಾ ಮಂಡಳಿ ಹಫೀಜ್ ಸಯ್ಯೀದ್ ಮತ್ತು ಆತನ ಬಿಡುಗಡೆಗೆ ಆದೇಶ ನೀಡಿದೆ ಎಂದು ತಿಳಿದುಬಂದಿದೆ. ಈ ಮುನ್ನ ನ್ಯಾಯಾಂಗ ಮಂಡಳಿ ವಿಧಿಸಿದ್ದ 90 ದಿನಗಳ ಗೃಹ ಬಂಧನ ಅವಧಿಯನ್ನು ಅ.24ರವರೆಗೂ ವಿಸ್ತರಿಸಲಾಗಿತ್ತು. ಮತ್ತೊಮ್ಮೆ ಬಂಧನ ವಿಸ್ತರಣೆಗೆ ಸಲ್ಲಿಸಲಾಗಿದ್ದ ಮನವಿ ವಾಪಸ್ ಹಿನ್ನೆಲೆಯಲ್ಲಿ ಅ.24ರ ಬಳಿಕ ಸಯೀದ್ ಬಿಡುಗಡೆಯಾಗುವ ಸಾಧ್ಯತೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics