ಹಫೀಜ್ ಸಯೀದ್ 
ವಿದೇಶ

ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಗೃಹ ಬಂಧನ ಅವಧಿ 30 ದಿನ ವಿಸ್ತರಣೆ

ಸಾರ್ವಜನಿಕ ರಕ್ಷಣೆ ಕಾಯ್ದೆಯಡಿ ಮುಂಬೈ ದಾಳಿಯ ರೂವಾರಿ, ಉಗ್ರ ಹಫೀಜ್ ಸಯೀದ್ ನ ಗೃಹ ಬಂಧನ ಅವಧಿಯನ್ನು ಪಾಕಿಸ್ತಾನದ....

ಲಾಹೋರ್: ಸಾರ್ವಜನಿಕ ರಕ್ಷಣೆ ಕಾಯ್ದೆಯಡಿ ಮುಂಬೈ ದಾಳಿಯ ರೂವಾರಿ, ಉಗ್ರ ಹಫೀಜ್ ಸಯೀದ್ ನ ಗೃಹ ಬಂಧನ ಅವಧಿಯನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತೀಯ ನ್ಯಾಯಾಂಗ ವಿಮರ್ಶೆ ಮಂಡಳಿ 30 ದಿನಗಳ ಕಾಲ ವಿಸ್ತರಣೆ ಮಾಡಿದೆ.
ಹಫೀಜ್ ಸಯೀದ್ ಗೃಹ ಬಂಧನ ಅವಧಿಯನ್ನು ವಿಸ್ತರಿಸುವಂತೆ ಕೋರಿ ಪಂಜಾಬ್ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಂಗ ವಿಮರ್ಶೆ ಮಂಡಳಿ ಪುರಷ್ಕರಿಸಿದೆ. ಆದರೆ ಆತನ ನಾಲ್ವರು ಸಹಚರರ ಬಂಧನ ಅವಧಿ ವಿಸ್ತರಿಸಲು ನಿರಾಕರಸಿದೆ.
ಕಳೆದ ಜನವರಿ 31ರಿಂದ ಗೃಹ ಬಂಧನದಲ್ಲಿರುವ ಜಮಾತ್-ಉದ್-ದವಾ(ಜೆಯುಡಿ) ಮುಖ್ಯಸ್ಥ ಸಯೀದ್ ನನ್ನು ಭಾರಿ ಭದ್ರತೆಯೊಂದಿಗೆ ಇಂದು ಪ್ರಾಂತೀಯ ನ್ಯಾಯಾಂಗ ವಿಮರ್ಶೆ ಮಂಡಳಿ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಂಗ ಮಂಡಳಿ, ಸಯೀದ್ ಗೃಹ ಬಂಧನ ಅವಧಿಯನ್ನು ಅಕ್ಟೋಬರ್ 24ರಿಂದ 30 ದಿನಗಳ ಕಾಲ ವಿಸ್ತರಿಸಿದೆ. ಆದರೆ ಸಯೀದ್ ಅವರ ನಾಲ್ವರು ಸಹಚರರಾದ ಅಬ್ದುಲ್ಲಾ ಉಬೈದ್, ಮಲಿಕ್ ಜಾಫರ್ ಇಕ್ಬಾಲ್, ಅಬ್ದುಲ್ ರೆಹಮಾನ್ ಅಬಿದ್ ಮತ್ತು ಖಝಿ ಕಾಶಿಫ್ ಹುಸೇನ್ ಅವರ ಗೃಹ ಬಂಧನ ಅವಧಿ ಮುಗಿದಿದ್ದು, ಜೈಲಿನಿಂದ ಬಿಡುಗಡೆಯಾಗಲಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!