ಬೀಜಿಂಗ್: ಮಸೂದ್ ಅಜರ್ ನ್ನು ವಿಶ್ವಸಂಸ್ಥೆ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಚೀನಾ ಮತ್ತೊಮ್ಮೆ ಅಡ್ಡಿ ಉಂಟುಮಾಡುವ ಸಾಧ್ಯತೆ ಇದೆ.
ಭಾರತ ಸಲ್ಲಿಸಿದ್ದ ಪ್ರಸ್ತಾವನೆಗೆ ಚೀನಾ ಮುಂದಿಟ್ಟಿದ್ದ ಆಕ್ಷೇಪಣೆಯ ಅವಧಿ ಕಳೆದ ವರ್ಷವೇ ಅಂತ್ಯಗೊಂಡಿದೆ. ಆದರೆ ಜನವರಿ ತಿಂಗಳಲ್ಲಿ ಮಸೂದ್ ಅಜರ್ ನ್ನು ವಿಶ್ವಸಂಸ್ಥೆ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಅಮೆರಿಕ ಮುಂದಿಟ್ಟಿದ್ದ ಪ್ರಸ್ತಾವನೆಗೂ ಚೀನಾ ಅಡ್ಡಗಾಲು ಹಾಕಿತ್ತು. ಚೀನಾದಿಂದ ಉಂಟಾಗಿದ್ದ ತಾಂತ್ರಿಕ ತಡೆ ಆಗಸ್ಟ್ ವರೆಗೂ ಅಸ್ತಿತ್ವದಲ್ಲಿತ್ತು. ನವೆಂಬರ್ 2 ರಂದು ಚೀನಾದ ತಾಂತ್ರಿಕ ತಡೆ ಅಂತ್ಯಗೊಳ್ಳಲಿದೆ.
ಈಗ ಮತ್ತೆ ಮಸೂದ್ ಅಜರ್ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ, ಈ ವಿಷಯದ ಬಗ್ಗೆ ಮತ್ತಷ್ಟು ಆಲೋಚಿಸಬೇಕಿದೆ ಎನ್ನುವ ಮೂಲಕ ಮತ್ತೆ ಅಡ್ಡಿ ಉಂಟುಮಾಡುವ ಸೂಚನೆ ನೀಡಿದ್ದಾರೆ.