ಇಸ್ಲಾಮಾಬಾದ್: ಪಾಕಿಸ್ತಾನದ ಸೆನೆಟ್ ನಲ್ಲಿ ಚುನಾವಣಾ ಸುಧಾರಣೆಗಳು-2017 ಮಸೂದೆ ಅಂಗೀಕಾರವಾಗಿದ್ದು ನವಾಜ್ ಷರೀಫ್ ಗೆ ಪಿಎಂಎಲ್-ಎನ್ ಅಧ್ಯಕ್ಷ ಸ್ಥಾನವನ್ನು ಮರಳಿಪಡೆಯಲು ಮಸೂದೆ ಸಹಕಾರಿಯಾಗಲಿದೆ.
ಪಾಕಿಸ್ತಾನ ಪೀಪಲ್ಸ್ ಪಕ್ಷ ಐತಾಜ್ ಆಹ್ಸಾನ್ ಪ್ರಸ್ತಾವನೆಯ ಮಸೂದೆಯನ್ನು ಸೆನೆಟ್ ತಿರಸ್ಕರಿಸಿದೆ. ಸಂಸತ್ ಸದಸ್ಯ ಸ್ಥಾನವನ್ನು ಹೊಂದದೇ ಇರುವವರು ಪಕ್ಷದ ಅಧ್ಯಕ್ಷರೂ ಆಗಿರಬಾರದು ಎಂದು ಪಿಪಿಪಿ ಪಕ್ಷ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಪಿಪಿಪಿ ಪಕ್ಷದ ಪ್ರಸ್ತಾವನೆಯನ್ನು ತಿರಸ್ಕರಿಸಿ ಮಸೂದೆಯನ್ನು ಅಂಗೀಕರಿಸಲಾಗಿದೆ.