ಪಾಕಿಸ್ತಾನ ಭಯೋತ್ಪಾದಕರಿಗೆ ನೆರವು ನೀಡುತ್ತಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶಗೊಂಡಿರುವ ಬೆನ್ನಲ್ಲೇ ಯುಎಸ್ ನ ಮಾಜಿ ಸೆನೆಟರ್ ಈ ಬಗ್ಗೆ ಮಾತನಾಡಿದ್ದು, ಅಮೆರಿಕ- ಭಾರತ ಸೇರಿ ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ನಾಶಗೊಳಿಸಬೇಕು ಎಂದು ಮಾಜಿ ಯುಎಸ್ ಸೆನೆಟರ್ ಅಭಿಪ್ರಾಯಪಟ್ಟಿದ್ದಾರೆ.
ಆದರೆ ಇದಕ್ಕಾಗಿ ಪೆಂಟಗನ್ ಒಪ್ಪಿಗೆ ಪಡೆಯಬೇಕಾಗುತ್ತದೆ. ಪೆಂಟಗನ್ ಈ ವರೆಗೂ ಪಾಕಿಸ್ತಾನದ ಬಗ್ಗೆ ಕಠಿಣ ನಿರ್ಧಾರ ಕೈಗೊಂಡಿಲ್ಲ, ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಭಯೋತ್ಪಾದನೆಯ ತಾಯ್ನಾಡು ಎಂದು ಉಲ್ಲೇಖಿಸಿದ್ದಕ್ಕೂ ಇದೇ ಉತ್ತೇಜನಕಾರಿಯಾಗಿರಬಹುದೆಂದು ಯುಎಸ್ ನ ಮಾಜಿ ಸೆನೆಟರ್ ಪ್ರೀಸ್ಲರ್ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದಿಂದ ಪಾಕಿಸ್ತಾನಕ್ಕೆ ಸಿಗುತ್ತಿದ್ದ ನೆರವಿಗೆ 199೦ ರಲ್ಲಿ ಕತ್ತರಿ ಬೀಳಲು ಕಾರಣವಾಗಿದ್ದ ತಿದ್ದುಪಡಿ ಮಸೂದೆ ಪ್ಲೀಸ್ಲರ್ ತಿದ್ದುಪಡಿ ಮಸೂದೆ ಎಂದೇ ಪ್ರಸಿದ್ಧಿಯಾಗಿದ್ದು, ಅಂದಿನ ಅಧ್ಯಕ್ಷರಾಗಿದ್ದ ಜಾರ್ಜ್ ಹೆಚ್ ಡಬ್ಲ್ಯೂ ಬುಷ್ ಸಹ ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂಬ ಅಂಶವನ್ನು ಒಪ್ಪಿದ್ದರು.