ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರಕ್ಕೆ ಮೊದಲ ಹಿನ್ನಡೆಯಾಗಿದ್ದು, ಟ್ರಂಪ್ ಆಪ್ತ ಹಾಗೂ ಅಮೆರಿಕ ಆರೋಗ್ಯ ಕಾರ್ಯದರ್ಶಿ ಟಾಮ್ ಪ್ರೈಸ್ ಶನಿವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಮೂಲಗಳ ಪ್ರಕಾರ ಟಾಮ್ ಪ್ರೈಸ್ ಅಮೆರಿಕದ ಸರ್ಕಾರಿ ಕೆಲಸಕ್ಕೆ ದುಬಾರಿ ಬೆಲೆಯ ಖಾಸಗಿ ವಿಮಾನಗಳನ್ನು ಬಳಕೆ ಮಾಡಿಕೊಂಡಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ವ್ಯಾಪಕ ನಷ್ಟವಾಗಿದೆ ಎಂದು ಈ ಹಿಂದೆ ಅಮೆರಿಕ ಮಾಧ್ಯಮಗಳು ವರದಿ ಪ್ರಕಟಿಸಿದ್ದವು. ಇದರಿಂದಲೇ ಟ್ರಂಪ್ ಸರ್ಕಾರಕ್ಕೆ ಮುಜುಗರ ಮಾಡಬಾರದು ಎಂಬ ಕಾರಣಕ್ಕೆ ಪ್ರೈಸ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಪ್ರೈಸ್ ನಿನ್ನೆಯೇ ರಾಜಿನಾಮೆ ನೀಡಿದ್ದು, ಇಂದು ತಡವಾಗಿ ಈ ಸುದ್ದಿ ಬೆಳಕಿಗೆ ಬಂದಿದೆ.
ಆರೋಗ್ಯ ಇಲಾಖೆಯ ಅಭಿವೃದ್ಧಿ ಕೆಲಸಗಳನ್ನು ಗುರುತಿಸುವ ಬದಲಿಗೆ ಮಾಧ್ಯಮಗಳು ಹುಳುಕುಗಳನ್ನು ಪ್ರಸಾರ ಮಾಡತ್ತಿವೆ. ಇದರಿಂದ ಇಲಾಖೆಯಲ್ಲಿ ಇತ್ತೀಚಿನ ಘಟನೆಗಳು ಗೊಂದಲವನ್ನುಂಟು ಮಾಡಿದೆ. ಸರ್ಕಾರಕ್ಕೆ ಮುಜುಗರ ಉಂಟುಮಾಡಬಾರದು ಎಂಬ ಕಾರಣಕ್ಕೆ ರಾಜಿನಾಮೆ ನೀಡಲಾಗುತ್ತಿದೆ ಎಂದು ಪ್ರೈಸ್ ತಮ್ಮ ರಾಜಿನಾಮೆ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಅರೋಗ್ಯ ಕಾರ್ಯದರ್ಶಿಯಾಗಿ ನೇಮಕವಾದ ಸಮಯದಿಂದ ಹಿಡಿದು ಇಲ್ಲಿಯವರೆಗೂ ಪ್ರೈಸ್ 26 ಬಾರಿ ಖಾಸಗಿ ವಿಮಾನಗಳಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿಂದೆ ಇದೇ ಪ್ರೈಸ್ ಅವರ ವಿರುದ್ಧ ಭಾರತೀಯ ಮೂಲದ ಪ್ರೀತ್ ಬರಾರ ಅವರು ತನಿಖೆ ನಡೆಸುತ್ತಿದ್ದರು. ಟಾಮ್ ಪ್ರೈಸ್ ಅವರ ಅವ್ಯವಹಾರ ಪ್ರಕರಣ ಸಂಬಂಧ ಬರಾರ ತನಿಖೆ ನಡೆಸುತ್ತಿದ್ದರು. ಇದೇ ಕಾರಣಕ್ಕೆ ಬರಾರ ಅವರನ್ನು ಟ್ರಂಪ್ ಸರ್ಕಾರ ವಜಾ ಮಾಡಿದೆ ಎಂದೂ ಈ ಹಿಂದೆ ಅಮೆರಿಕ ಮಾಧ್ಯಮಗಳು ವರದಿ ಮಾಡಿದ್ದವು. ಸಂಸದರಾಗಿದ್ದ ವೇಳೆ ಟಾಮ್ ಅವರು ಆರೋಗ್ಯ ಷೇರುಗಳನ್ನು ಸರಿಯಾದ ರೀತಿಯಲ್ಲಿ ಮಾರಾಟ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿತ್ತು, ಈ ಕುರಿತು ಬರಾರ ತನಿಖೆ ನಡೆಸಿದ್ದರು ಅಲ್ಲದೆ ಒಬಾಮ ಕೇರ್ ಆರೋಗ್ಯ ಸೇವೆರದ್ದು ಮಾಡುವಲ್ಲಿ ಟಾಮ್ ಅವರು ಪ್ರಮುಖ ಪಾತ್ರ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics