ಬೆಂಗಳೂರು: ಪ್ರಸ್ತುತ ಭಾರತದಲ್ಲಿ ತಮ್ಮ ಮಕ್ಕಳಿಗೆ ಹಿಂದೂ ದೇವಾನು ದೇವತೆಗಳ ಹೆಸರನ್ನಿಡಲು ಇಂದು ಮುಂದೆ ನೋಡುತ್ತಾರೆ. ಆದರೆ ಜಪಾನ್ ನಲ್ಲಿ ಒಂದು ಪಟ್ಟಣಕ್ಕೆ ಹಿಂದು ದೇವಿ ಲಕ್ಷ್ಮೀ ಹೆಸರನ್ನು ಇಡಲಾಗಿದೆ.
ಜಪಾನ್ ನ ರಾಜಧಾನಿ ಟೋಕಿಯಾದಲ್ಲಿ ಒಂದು ಪಟ್ಟಣವಿದೆ ಅದರ ಹೆಸರು ಕಿಚಿಜೊ(ಲಕ್ಷ್ಮೀ ದೇವಸ್ಥಾನ ಎಂದರ್ಥ). ತ್ರಿಮೂರ್ತಿಗಳ ಪೈಕಿ ಒಬ್ಬರಾಗಿರುವ ಭಗವಂತ ವಿಷ್ಣುವಿನ ಪತ್ನಿ ಲಕ್ಷ್ಮೀ ದೇವಿ. ಲಕ್ಷ್ಮೀ ದೇವಿಯ ಹೆಸರನ್ನು ಟೋಕಿಯಾದ ಪಟ್ಟಣಕ್ಕೆ ಇಡಲಾಗಿದೆ ಎಂದು ಜಪಾನ್ ಕಾನ್ಸುಲ್ ಜನರಲ್ ಟಕಾಯುಕಿ ಕಿಟಗಾವಾ ಅವರು ಹೇಳಿದ್ದಾರೆ.
ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನ ಪದವಿ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಟಕಾಯುಕಿ ಅವರು ವಿದ್ಯಾರ್ಥಿಗಳಿಗೆ ಈ ವಿಷಯವನ್ನು ತಿಳಿಸಿದ್ದಾರೆ.
ಜಪಾನ್ ಸಂಸ್ಕೃತಿ ಮತ್ತು ಸಮಾಜದ ಮೇಲೆ ಭಾರತದ ಪ್ರಭಾವ ಹೆಚ್ಚಿದೆ. ಜಪಾನ್ ಮತ್ತು ಭಾರತ ವಿಭಿನ್ನವಾಗಿದೆ ಎಂದು ಹಲವರು ಹೇಳುತ್ತಾರೆ. ಆದರೆ ಜಪಾನ್ ನಲ್ಲಿ ಅನೇಕ ಹಿಂದೂ ದೇವತೆಗಳ ದೇವಸ್ಥಾನವಿದೆ ಎಂದು ಕಿಟಗಾವಾ ಅವರು ತಿಳಿಸಿದ್ದಾರೆ.
ಸೂರ್ಯ ಉದಯ ನಾಡು ಜಪಾನ್ ನಲ್ಲಿ ಪೂಜಿಸಲ್ಪಡುವ ಹಲವು ಹಿಂದೂ ದೇವತೆಗಳಿವೆ. ಶತಮಾನಗಳಿಂದ ನಾವು ಹಿಂದೂ ದೇವರುಗಳನ್ನು ಪೂಜಿಸುತ್ತಾ ಬಂದಿದ್ದೇವೆ ಎಂದು ಕಿಟಗಾವಾ ಅವರು ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ್ದು ಆಡಿಟೋರಿಯಂನಲ್ಲಿ ದ್ದ ವಿದ್ಯಾರ್ಥಿಗಳೆಲ್ಲ ಮೂಕ ವಿಸ್ಮಿತರಾದರು.
ಜಪಾನ್ ಭಾಷೆ ಕೂಡ ಭಾರತೀಯ ಭಾಷೆಗಳಿಂದ ಪ್ರಭಾವಿತವಾಗಿದೆ. ಹಲವು ಸಂಸ್ಕೃತ ಪದಗಳು ಜಪಾನಿನ ಲಿಪಿಯಲ್ಲಿದೆ ಎಂದರು.