ವಿದೇಶ

ಲಂಡನ್ : ಸಂಸತ್ ಕಟ್ಟಡದ ಹೊರಗಡೆ ಕಾರು ಅಪಘಾತ : ಪಾದಾಚಾರಿಗಳಿಗೆ ಗಾಯ

Nagaraja AB

ಲಂಡನ್ : ಬ್ರಿಟನ್ ಸಂಸತ್ ಭವನದ ಹೊರಗಡೆ ಇರುವ ತಡೆಗೋಡೆಗೆ ಕಾರೊಂದು ನುಗ್ಗಿದ  ಪರಿಣಾಮ  ಅನೇಕ ಪಾದಾಚಾರಿಗಳು ಗಾಯಗೊಂಡಿರುವ ಘಟನೆ ನಡೆದಿದೆ. ಕಾರಿನ ಚಾಲಕನನ್ನು  ಪೊಲೀಸರು ಬಂಧಿಸಿದ್ದಾರೆ.

ಘಟನಾ ಸ್ಥಳದಿಂದ ಪುರುಷ ಕಾರು ಚಾಲಕನನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿರುವುದಾಗಿ ಹೇಳಲಾಗಿದೆ. ಕಾರು ಚಾಲಕ ಶಂಕಿತ ಉಗ್ರಗಾಮಿಯೇ ಎಂಬುದರ ಬಗ್ಗೆ ಪೊಲೀಸರು ಏನೂ ಹೇಳಿಲ್ಲ.

ಬೆಳಗ್ಗೆ 7.37ರ ಸುಮಾರಿನಲ್ಲಿ ಕಾರು ಅಪಘಾತವಾದ ನಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.  ವಾಹನವನ್ನು ತೆರವುಗೊಳಿಸಿದಾಗ  ಚಾಲಕನ ಬಳಿ  ಬಂದೂಕು ಇದದ್ದು ಕಂಡುಬಂದಿದೆ  ಎಂದು ಟ್ವಿಟರ್ ನಲ್ಲಿ ಹಾಕಲಾಗಿದೆ.ಪೊಲೀಸರು ಬಂಧಿಸಿರುವ ವ್ಯಕ್ತಿ ಜಿನ್ಸ್ ಹಾಗೂ ಕಪ್ಪು ಬಣ್ಣದ ಜಾಕೆಟ್  ಧರಿಸಿರುವುದು ಚಿತ್ರದಲ್ಲಿ ಕಂಡುಬಂದಿದೆ.

ಕಳೆದ ವರ್ಷ ವೆಸ್ಟ್ ಮಿನಿಸ್ಟರ್  ಬಳಿಯೂ  ಭಯೋತ್ಪಾದಕ ದಾಳಿ ನಡೆದಿತ್ತು. 52 ವರ್ಷದ ಖಲೀದ್ ಮಸೂದ್  ಎಂಬಾತ ಥೆಮ್ಸ್ ನದಿಯ ಮೇಲ್ಸುತುವೆ ಮೇಲೆ ಪಾದಾಚಾರಿ ಮಾರ್ಗದಲ್ಲಿ ವಾಹನ ಚಲಾಯಿಸಿ ಸಂಸತ್ ಹೊರಗಡೆ ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದ ಪೊಲೀಸ್ ವೊಬ್ಬರಿಗೆ ತಾಕು  ಇರಿದಿದ್ದ.  ದಾಳಿಯಿಂದಾಗಿ ಐವರು ಮೃತಪಟ್ಟಿದ್ದರು. 50 ಮಂದಿ ಗಾಯಗೊಂಡಿದ್ದರು. ಪೊಲೀಸರು ಒಬ್ಬ ಉಗ್ರನನ್ನು ಹತ್ಯೆ ಮಾಡಿದ್ದರು.

SCROLL FOR NEXT