4ನೇ ಬಿಐಎಂಎಸ್ ಟಿಇಸಿ ಶೃಂಗಸಭೆ ಹಿನ್ನೆಲೆ, ಕಠ್ಮಂಡು ತಲುಪಿದ ಪ್ರಧಾನಿ ಮೋದಿ 
ವಿದೇಶ

4ನೇ ಬಿಐಎಂಎಸ್ ಟಿಇಸಿ ಶೃಂಗಸಭೆ ಹಿನ್ನೆಲೆ, ಕಠ್ಮಂಡು ತಲುಪಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಗುರುವಾರ ನೇಪಾಳದ ಖಠಮ್ಂಡುವಿಗೆ ಆಗಮಿಸಿದ್ದಾರೆ. ಕಠ್ಮಂಡುವಿನಲ್ಲಿ ನಡೆಯುವ ನಾಲ್ಕನೇ ಬಿಐಎಂಎಸ್ ಟಿಇಸಿ ....

ಕಠ್ಮಂಡು: ಪ್ರಧಾನಿ ನರೇಂದ್ರ ಮೋದಿ ಗುರುವಾರ ನೇಪಾಳದ  ಕಠ್ಮಂಡುವಿಗೆ ಆಗಮಿಸಿದ್ದಾರೆ. ಕಠ್ಮಂಡುವಿನಲ್ಲಿ ನಡೆಯುವ ನಾಲ್ಕನೇ ಬಿಐಎಂಎಸ್ ಟಿಇಸಿ  (ಬಹು-ಕ್ಷೇತ್ರ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಉಪಕ್ರಮ) ದಲ್ಲಿ ಅವರು ಭಾಗವಹಿಸಲಿದ್ದಾರೆ
ಬಿಐಎಂಎಸ್ ಟಿಇಸಿ ದಕ್ಷಿಣ ಏಷ್ಯಾದ  ಏಳು ರಾಷ್ಟ್ರಗಳ ಅಂತರಾಷ್ಟ್ರೀಯ ಸಂಘಟನೆಯಾಗಿದೆ. ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್, ಶ್ರೀಲಂಕಾ, ಥೈಲ್ಯಾಂಡ್, ಭೂತಾನ್ ಮತ್ತು ನೇಪಾಳ.ಇದರ ಸದಸ್ಯ ರಾಷ್ಟ್ರಗಳಾಗಿವೆ.
ಬಾಂಗ್ಲಾದೇಶ, ಭೂತಾನ್, ಮಯನ್ಮಾರ್, ಶ್ರೀಲಂಕಾ ಮತ್ತು ಥೈಲ್ಯಾಂಡ್ ಮುಖಂಡರೊಂದಿಗೆ ಸಂವಾದ ನಡೆಸುವುದಾಗಿಯೂ ನೇಪಾಳಕ್ಕೆ ತೆರಳುವ ಮುನ್ನ ಪ್ರಧಾನಿ ಮೋದಿ ಸುದ್ದಿಗಾರರಿಗೆ ತಿಳಿಸಿದರು.
ಈ ಹಿಂದೆ ಮೇ 2018 ರ ತಾನು ನೇಪಾಳಕ್ಕೆ ತೆರಳಿ ನೇಪಾಳ ಪ್ರಧಾನ ಮಂತ್ರಿ ಕೆ. ಪಿ. ಶರ್ಮಾ ಒಲಿ ಅವರನ್ನು ಭೇಟಿಯಾಗಿದ್ದು ಇದೀಗ  ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ಪರ್ಗತಿ ಪರಿಶೀಲಿಸಲು ಸಹ ಸಹಕಾರಿಯಾಗಿದೆ ಎಂದು ಮೋದಿ ಹೇಳಿದ್ದಾರೆ.
ಪಶುಪತಿನಾಥ ದೇವಸ್ಥಾನ ಸಂಕೀರ್ಣದಲ್ಲಿ ನೇಪಾಳ-ಭಾರತ ಮೈತ್ರಿ ಧರ್ಮಶಾಲೆಯನ್ನು ಅವರು ಉದ್ಘಾಟಿಸಲಿದ್ದಾರೆ."ಈ ಭೇಟಿಯು ಆಗ್ನೇಯ ಏಷ್ಯಾ ರಾಷ್ಟ್ರಗಳು ಹಾಗೂ ನಮ್ಮ ನೆರೆ ರಾಷ್ಟ್ರಗಳೊಡನೆ  ನಮ್ಮ ಸಂಬಂಧವನ್ನು ಗಾಢವಾಗಿಸಲು ನೆರವಾಗಲಿದೆ"  ಎಂದು ಪ್ರಧಾನಿ ಹೇಳಿದ್ದಾರೆ.
ನಮ್ಮ ಪ್ರಾದೇಶಿಕ ಸಹಕಾರವನ್ನು ಮತ್ತಷ್ಟು ಉತ್ಕೃಷ್ಟಗೊಳಿಸಲು, ನಮ್ಮ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸಲು ಮತ್ತು ಬಂಗಾಳ ಪ್ರದೇಶದ ಶಾಂತಿಯುತ ಮತ್ತು ಸಮೃದ್ಧವಾದ ವಲಯವನ್ನು ನಿರ್ಮಿಸಲು ಕುರಿತು ಬಿಐಎಂಎಸ್ ಟಿಇಸಿ ನ ಎಲ್ಲಾ ನಾಯಕರೊಡನೆ ಮೋದಿ ಸಂವಹನ ನಡೆಸಲಿದ್ದಾರೆ.\

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT