ವಿದೇಶ

ಪ್ರೇಮಿಗಳ ದಿನ ಇಸ್ಲಾಂ ವಿರೋಧಿ ಎಂದ ಪಾಕ್ ಕೋರ್ಟ್, ವ್ಯಾಲೆಂಟೈನ್ಸ್‌ ಡೇಗೆ ನಿಷೇಧ

Lingaraj Badiger
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮತ್ತೆ ವ್ಯಾಲೆಂಟೈನ್ಸ್ ಡೇ(ಪ್ರೇಮಿಗಳ ದಿನಾಚರಣೆ) ಆಚರಿಸಲು ಮತ್ತು ಅದನ್ನು ಪ್ರಸಾರ ಮಾಡದಂತೆ ನಿಷೇಧ ಹೇರಲಾಗಿದ್ದು, ದೇಶಾದ್ಯಂತ ಫೆಬ್ರುವರಿ 14ರಂದು ಪ್ರೇಮಿಗಳ ದಿನ ಆಚರಿಸದಂತೆ ಪಾಕ್ ಹೈಕೋರ್ಟ್ ನಿಷೇಧ ಹೇರಿದೆ. ಅಲ್ಲದೆ ವ್ಯಾಲೆಂಟೈನ್ಸ್‌ ಡೇಗೆ ಇಸ್ಲಾಂ ವಿರೋಧಿ ಎಂದು ಹೇಳಿದೆ.
ವ್ಯಾಲೆಂಟೈನ್ಸ್‌ ಡೇ ಆಚರಣೆ ನಿಷೇಧಿಸಿ ಮತ್ತು ಅದಕ್ಕೆ ಪ್ರಚಾರ ನೀಡದಂತೆ ಮಾಧ್ಯಮಗಳಿಗೆ ಮಂಗಳವಾರ ಕೋರ್ಟ್ ಆದೇಶ ನೀಡಿದ್ದು, ಕೋರ್ಟ್ ಆದೇಶದ ಪ್ರತಿಯೊಂದಿಗೆ ಪಾಕಿಸ್ತಾನದ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಎಲ್ಲಾ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ನಿರ್ದೇಶನ ನೀಡಿದೆ ಎಂದು ವೈಸ್ ಆಫ್ ಅಮೆರಿಕಾ ವರದಿ ಮಾಡಿದೆ. 
ಸಾವರ್ಜನಿಕ ಸ್ಥಳಗಳಲ್ಲಿ ಯಾವುದೇ ಅಧಿಕೃತ ಅಥವಾ ಅನಧಿಕೃತ ಆಚರಣೆ ನಡೆಸದಂತೆ ಮತ್ತು ಅದಕ್ಕೆ ಪ್ರಚಾರ ನೀಡದಂತೆ ಪಾಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ವರ್ಷ ಸಹ ಇಸ್ಲಾಮಾಬಾದ್ ಹೈಕೋರ್ಟ್ ಪ್ರೇಮಿಗಳ ದಿನಾಚರಣೆಗೆ ನಿಷೇಧ ಹೇರಿತ್ತು.
SCROLL FOR NEXT