ಮೆಕ್ಸಿಕೋ : ಮೆಕ್ಸಿಕೋ ಕ್ಯಾಬಿನೆಟ್ ಸಚಿವರೊಬ್ಬರ ಹೆಲಿಕಾಪ್ಟರ್ ಭೂಕಂಪನದ ಕೇಂದ್ರಬಿಂದು ಒಕ್ಸಾಕೋದಲ್ಲಿ ಲ್ಯಾಂಡ್ ಆಗುವ ಸಂದರ್ಭದಲ್ಲಿ ಪತನ ಹೊಂದಿದ್ದು, ಮೂವರು ಮಕ್ಕಳು ಸೇರಿದಂತೆ 13 ಮಂದಿ ದುರ್ಮರಣಹೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಳಾಡಳಿತ ಸಚಿವ ಅಲ್ಫಾನ್ಸೋ ನವಾರೇಟಿ ಮತ್ತು ಒಕ್ಸಾಕಾ ರಾಜ್ಯ ಗೌರ್ನರ್ ಅಲೆಜಾಂಡ್ರೋ ಮುರಾತ್ ಅವರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನಹೊಂದಿದೆ. ಆದರೆ, ಅದೃಷ್ಟಾವಶತ್ ಅವರಿಬ್ಬರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂಬುದು ತಿಳಿದುಬಂದಿದೆ.
ಐವರು ಮಹಿಳೆಯರು, ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ , ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.