ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

11 ಅಪಾಯಕಾರಿ ರಾಷ್ಟ್ರಗಳ ಪಟ್ಟಿ: ನಿರಾಶ್ರಿತರ ಮೇಲಿನ ನಿಷೇಧ ತೆರವುಗೊಳಿಸಿದ ಅಮೆರಿಕ

ಅಮೆರಿಕದಲ್ಲಿರುವ ವಿದೇಶಿಗರ ಮೇಲೆ ಟ್ರಂಪ್ ಸರ್ಕಾರ ಹೇರಿದ್ದ ನಿರ್ಬಂಧಗಳನ್ನು ಕ್ರಮೇಣ ತೆರವುಗೊಳಿಸಲಾಗುತ್ತಿದ್ದು, ಈ ಹಿಂದೆ 11 ಅಪಾಯಕಾರಿ ರಾಷ್ಟ್ರಗಳ ನಿರಾಶ್ರಿತರ ಮೇಲೆ ಹೇರಲಾಗಿದ್ದ ನಿಷೇಧವನ್ನು ಅಮೆರಿಕ ತೆರವುಗೊಳಿಸಿದೆ ಎಂದು ತಿಳಿದುಬಂದಿದೆ.

ಸಂಗ್ರಹ ಚಿತ್ರ
Srinivasa Murthy VN
Updated On : 30 Jan 2018, 9:32 am
ವಾಷಿಂಗ್ಟನ್: ಅಮೆರಿಕದಲ್ಲಿರುವ ವಿದೇಶಿಗರ ಮೇಲೆ ಟ್ರಂಪ್ ಸರ್ಕಾರ ಹೇರಿದ್ದ ನಿರ್ಬಂಧಗಳನ್ನು ಕ್ರಮೇಣ ತೆರವುಗೊಳಿಸಲಾಗುತ್ತಿದ್ದು, ಈ ಹಿಂದೆ 11 ಅಪಾಯಕಾರಿ ರಾಷ್ಟ್ರಗಳ ನಿರಾಶ್ರಿತರ ಮೇಲೆ ಹೇರಲಾಗಿದ್ದ ನಿಷೇಧವನ್ನು  ಅಮೆರಿಕ ತೆರವುಗೊಳಿಸಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಟ್ರಂಪ್ ಸರ್ಕಾರ ಕೈಗೊಂಡಿದ್ದ ನಿರ್ಧಾರದಿಂದಾಗಿ 11 ರಾಷ್ಟ್ರಗಳ ನಾಗರಿಕರ ಅಮೆರಿಕ ಪ್ರವೇಶ ಕಠಿಣವಾಗಿತ್ತು. ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳ ಎಂಬ ಪಟ್ಟಿ ಬಿಡುಗಡೆ ಮಾಡಿದ್ದ ಅಮೆರಿಕ ಸರ್ಕಾರ, ಈಜಿಪ್ಟ್,  ಇರಾನ್, ಇರಾಕ್, ಲಿಬಿಯಾ, ಮಾಲಿ, ಉತ್ತರ ಕೊರಿಯಾ, ಸೊಮಾಲಿಯಾ, ದಕ್ಷಿಣ ಸುಡಾನ್, ಸುಡಾನ್, ಸಿರಿಯಾ ಮತ್ತು ಯೆಮೆನ್ ರಾಷ್ಟ್ರಗಳ ನಾಗರಿಕರು ಅಮೆರಿಕ ಪ್ರವೇಶ ಮಾಡದಂತೆ ಪ್ರವೇಶ ನಿರ್ಬಂಧ ಹೇರಿತ್ತು. ಅಮೆರಿಕ  ನಿರ್ಧಾರಕ್ಕೆ ಅಮೆರಿಕದಲ್ಲೇ ವ್ಯಾಪಕ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತಾದರೂ, ಇದೀಗ ವಿದೇಶಿಗರ ಕುರಿತಂತೆ ಟ್ರಂಪ್ ಸರ್ಕಾರ ಮೃದು ಧೋರಣೆ ತಳೆದಿದ್ದು, ಈ ಹಿಂದೆ ಹೇರಲಾಗಿದ್ದ ಅಮೆರಿಕ ಪ್ರವೇಶ ನಿರ್ಬಂಧವನ್ನು  ತೆರವುಗೊಳಿಸಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಮೆರಿಕ ಸರ್ಕಾರ, ಈ ಹಿಂದೆ ಭದ್ರತೆ ಮತ್ತು ಆಂತರಿಕ ಸುರಕ್ಷೆಯ ಕಾರಣದಿಂದಾಗಿ ಅಮೆರಿಕ ಸರ್ಕಾರ 11 ರಾಷ್ಟ್ರಗಳ ನಾಗರಿಕರ ಮೇಲೆ ನಿರ್ಬಂಧ ಹೇರಿತ್ತು. ಯಾವುದೇ ಧರ್ಮ ಮತ್ತು ಜಾತಿಯನ್ನು  ಗುರಿಯಾಗಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಆದರೆ ದೇಶದ ಆಂತರಿಕ ಭದ್ರತೆ ನಮಗೆ ಮುಖ್ಯ. ಹೀಗಾಗಿ  ವಿದೇಶಿಗರ ಕುರಿತು ಕಠಿಣ ಕ್ರಮಗಳು ಅಗತ್ಯವಾಗಿತ್ತು ಎಂದು ಹೇಳಿದೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement