ಸಂಗ್ರಹ ಚಿತ್ರ 
ವಿದೇಶ

ಸ್ವಿಸ್ ಬ್ಯಾಂಕ್ ನಲ್ಲಿ ಹಣ: 73ನೇ ಸ್ಥಾನದಲ್ಲಿ ಭಾರತ, ಅಗ್ರ ಸ್ಥಾನದಲ್ಲಿ ಬ್ರಿಟನ್ ಮುಂದುವರಿಕೆ

ಖ್ಯಾತ ಅಂತಾರಾಷ್ಟ್ರೀಯ ಬ್ಯಾಂಕ್ ಸ್ವಿಸ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿರುವ ವಿವಿಧ ದೇಶಗಳ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಭಾರತ 73ನೇ ಸ್ಥಾನದಲ್ಲಿದೆ

ನವದೆಹಲಿ: ಖ್ಯಾತ ಅಂತಾರಾಷ್ಟ್ರೀಯ ಬ್ಯಾಂಕ್ ಸ್ವಿಸ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿರುವ  ವಿವಿಧ ದೇಶಗಳ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಭಾರತ 73ನೇ ಸ್ಥಾನದಲ್ಲಿದೆ
ಸ್ವಿಟ್ಜರ್ಲೆಂಡ್ ಸರ್ಕಾರ ತನ್ನ ವಾರ್ಷಿಕ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದ್ದು, ಬ್ಯಾಂಕ್ ನ ವಿದೇಶಿಗರ ಹೂಡಿಕೆ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಪಟ್ಟಿಯಲ್ಲಿ ಭಾರತ 73ನೇ ಸ್ಥಾನಕ್ಕೆ ಕುಸಿದಿದೆ. ಭಾರತದಿಂದ ಸ್ವಿಸ್ ಬ್ಯಾಂಕ್ ಗೆ 1.01 ಬಿಲಿಯನ್ ಡಾಲರ್ (7 ಸಾವಿರ ಕೋಟಿ) ಹಣ ಹೂಡಿಕೆಯಾಗಿದೆ. 2016ರಲ್ಲಿ ದೇಶದಲ್ಲಿ ತಂದ ಆರ್ಥಿಕ ನೀತಿಗಳಿಂದಾಗಿ ಭಾರತದ ಹೂಡಿಕೆಯಲ್ಲಿ ಶೇ.44ರಷ್ಟು ಕುಸಿದು ಭಾರತ 88ನೇ ಸ್ಥಾನಕ್ಕೆ ಕುಸಿದಿತ್ತು. ಕಳೆದ ವರ್ಷ ಚೇತರಿಸಿಕೊಂಡಿದ್ದ ಭಾರತ ಇದೀಗ ಮತ್ತೆ ಸ್ವಿಸ್ ಬ್ಯಾಂಕ್ ನಲ್ಲಿ ತನ್ನ ಹೂಡಿಕೆಯನ್ನು ಶೇ.50ರಷ್ಟು (ಸುಮಾರು 7 ಸಾವಿರ ಕೋಟಿ )ಏರಿಕೆ ಮಾಡಿಕೊಂಡಿದ್ದು, 74ನೇ ಸ್ಥಾನಕ್ಕೆೇರಿದೆ.
ಇನ್ನು ಪಟ್ಟಿಯಲ್ಲಿ ಬ್ರಿಟನ್ ದೇಶ ಅತೀ ಹೆಚ್ಚು ಹೂಡಿಕೆಯೊಂದಿಗೆ ಅಗ್ರಸ್ಥಾನಿಯಾಗಿ ಮುಂದುವರೆದಿದ್ದು, ಪಾಕಿಸ್ತಾನ ಭಾರತಕ್ಕಿಂತ ಒಂದು ಸ್ಥಾನ ಮೇಲೆ ಅಂದರೆ 72ನೇ ಸ್ಥಾನದಲ್ಲಿದೆ. ಇನ್ನು ಭಾರತದ ಒಟ್ಟಾರೆ ಗ್ರಾಹಕ ಸಂಖ್ಯೆಯಲ್ಲಿ 0.004ರಷ್ಟು ಏರಿಕೆ ಕಂಡುಬಂದಿದೆ. ಕಳೆದ ಈ ಪ್ರಮಾಣ 0.007ರಷ್ಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ಜಾರೆ.
2015ರಲ್ಲಿ ಭಾರತ 75ನೇ ಸ್ಥಾನದಲ್ಲಿತ್ತು. 2016ರಲ್ಲಿ 61ನೇ ಸ್ಥಾನದಲ್ಲಿತ್ತು.
ಪ್ರಸ್ತುತ ಸ್ವಿಸ್ ಬ್ಯಾಂಕ್ ಅಧಿಕಾರಿಗಳು ಹೂಡಿಕೆ ಪ್ರಮಾಣದ ಆಧಾರದ ಮೇಲೆ ದೇಶಗಳ ಪಟ್ಟಿಯನ್ನು ತಯಾರಿಸಿದ್ದು, ಆ ಪಟ್ಟಿಯಲ್ಲಿ ಗ್ರಾಹಕರ ವಿವರ ಮತ್ತು ಹೂಡಿಕೆ ಪ್ರಮಾಣವನ್ನು ನಮೂದಿಸಿಲ್ಲ. ಇದು ಸ್ವಿಸ್ ಬ್ಯಾಂಕ್ ನಿಯಮಗಳ ಉಲ್ಲಂಘನೆಯಾಗುತ್ತದೆ. ಹೀಗಾಗಿ ವಿವರ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ಗ್ರಾಹಕರು ಬೇರೆ ದೇಶಕ್ಕೆ ಸೇರಿದ್ದು ಮತ್ತೊಂದು ದೇಶದಿಂದ ಸ್ವಿಸ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿದ್ದಾರೆ. 2017ರಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿನ ಹೂಡಿಕೆ ಪ್ರಮಾಣದಲ್ಲಿ ಶೇ.3ರಷ್ಚು ಏರಿಕೆ ಕಂಡುಬಂದಿದ್ದು, ಒಟ್ಟಾರೆ ಮೊತ್ತ 1.46 ಟ್ರಿಲಿಯನ್ (100 ಲಕ್ಷ ಕೋಟಿ)ಡಾಲರ್ ಗೆ ಏರಿಕೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!