ಟೊರಾಂಟೋ: ರೆಸ್ಟೋರೆಂಟ್ ಬಳಿ ಗುಂಡಿನ ದಾಳಿ, ದಾಳಿಕೋರ ಸೇರಿ ಇಬ್ಬರ ಸಾವು, ಹಲವರಿಗೆ ಗಾಯ
ಅಮೆರಿಕದ ಟೊರಾಂಟೋದಲ್ಲಿ ಮತ್ತೆ ಶೂಟೌಟ್ ಸಂಸ್ಕೃತಿ ಮುಂದುವರೆದಿದ್ದು, ಸೋಮವಾರ ದುಷ್ಕರ್ಮಿಯೋರ್ವ ಗುಂಡಿನ ದಾಳಿ ನಡೆಸಿದ ಪರಿಣಾಮ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಟೊರಾಂಟೋ: ಅಮೆರಿಕದ ಟೊರಾಂಟೋದಲ್ಲಿ ಮತ್ತೆ ಶೂಟೌಟ್ ಸಂಸ್ಕೃತಿ ಮುಂದುವರೆದಿದ್ದು, ಸೋಮವಾರ ದುಷ್ಕರ್ಮಿಯೋರ್ವ ಗುಂಡಿನ ದಾಳಿ ನಡೆಸಿದ ಪರಿಣಾಮ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಟೊರಾಂಟೋದ ಯಾಂಗ್ ಸ್ಟ್ರೀಟ್ ನಲ್ಲಿರುವ ಖ್ಯಾತ ರೆಸ್ಟೋರೆಂಟ್ ವೊಂದರಲ್ಲಿ ಈ ದಾಳಿ ನಡೆದಿದ್ದು, ರಾತ್ರಿ 10 ಗಂಟೆ ಸುಮಾರಿನಲ್ಲಿ ದುಷ್ಕರ್ಮಿಯೋರ್ವ ದಿಢೀರ್ ಗುಂಡಿನ ದಾಳಿ ನಡೆಸಿದ್ಜಾನೆ. ಸುಮಾರು 15 ಸುತ್ತಿಗೂ ಹೆಚ್ಚು ಬಾರಿ ದಾಳಿಕೋರ ಗುಂಡು ಹಾರಿಸಿದ್ದು, ಈ ವೇಳೆ ಹಲವರಿಗೆ ಗುಂಡೇಟು ತಗುಲಿದೆ. ಪರಿಣಾಮ ಹಲವರು ಸ್ಥಳದಲ್ಲೇ ಅಸುನೀಗಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇನ್ನು ದಾಳಿ ಬಳಿಕ ದಾಳಿಕೋರನೂ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸ್ ಮೂಲಗಳ ಪ್ರಕಾರ ಈ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಟೊರಾಂಟೋದ ವಿವಿಧ ಆಸ್ಪತ್ರೆಗಳಿಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪ್ರಸ್ತುತ ದಾಳಿಗೀಡಾಗಿರುವ ರೆಸ್ಟೋರೆಂಟ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.