ಪಿಟಿಎ ಮುಖ್ಯಸ್ಥ ಇಮ್ರಾನ್ ಖಾನ್ 
ವಿದೇಶ

ಪಾಕಿಸ್ತಾನದ ಅದೃಷ್ಟ ಬದಲಾಯಿಸಲು ನಮಗೆ ಮತ ಹಾಕಿ; ಇಮ್ರಾನ್ ಖಾನ್

ಪಾಕಿಸ್ತಾನದ ಅದೃಷ್ಟ ಬದಲಾಯಿಸಲು ನಮ್ಮ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ)ಗೆ ಮತ ನೀಡಿ ಎಂದು ಪಿಟಿಎ ಮುಖ್ಯಸ್ಥ ಇಮ್ರಾನ್ ಖಾನ್ ಅವರು ಸೋಮವಾರ ಹೇಳಿದ್ದಾರೆ...

ಲಾಹೋರ್:ಪಾಕಿಸ್ತಾನದ ಅದೃಷ್ಟ ಬದಲಾಯಿಸಲು ನಮ್ಮ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ)ಗೆ ಮತ ನೀಡಿ ಎಂದು ಪಿಟಿಎ ಮುಖ್ಯಸ್ಥ ಇಮ್ರಾನ್ ಖಾನ್ ಅವರು ಸೋಮವಾರ ಹೇಳಿದ್ದಾರೆ. 
ರ್ಯಾಲಿಯೊಂದರಲ್ಲಿ ಮಾತನಾಡಿರುವ ಅವರು, ಚುನಾವಣೆಯಿಂದ ಪಿಟಿಐ ಪಕ್ಷವನ್ನು ದೂರ ಉಳಿಸುವ ಸಲುವಾಗಿ ವಿವಿಧ ಪಕ್ಷಗಳು ಒಗ್ಗೂಡಿ ಬರಬೇಕಾಗಿದೆ. ಯಾವುದೇ ಸಂದರ್ಭದಲ್ಲಿಯೇ ಆದರೂ ಪಾಕಿಸ್ತಾನದ ಅದೃಷ್ಟವನ್ನು ಬದಲಾಯಿಸಲು ನಮ್ಮ ಪಕ್ಷಕ್ಕೆ ಮತ ನೀಡಿ ಎಂದು ಕೇಳಿದ್ದಾರೆ. 
ಈ ವೇಳೆ ಷರೀಫ್ ಕುಟುಂಬದ ವಿರದ್ಧ ಕಿಡಿಕಾರಿರುವ ಇಮ್ರಾನ್, ನಾನು ಪುಟ್ಟ ಬಾಲಕನಿದ್ದಾಗ ಅಮೆರಿಕಾದ ಡಾಲರ್ ಪಾಕಿಸ್ತಾನದ 5 ರುಪಾಯಿಗಳಷ್ಟಿತ್ತು. ಇದೀಗ 130 ರುಪಾಯಿಗಳಾಗಿದೆ. ಅಮೆರಿಕಾದ ಪ್ರಜೆಗಳ ಮಕ್ಕಳು ಶತಕೋಟ್ಯಾಧಿಪತಿಗಳಾಗುತ್ತಿದ್ದಾರೆ. ನಮ್ಮ ದೇಶವನ್ನು ಲೂಟಿ ಮಾಡಿ, ನಾವು ಹಿಂದೆ ಇರುವಂತೆ ಮಾಡುತ್ತಿದ್ದಾರೆಂದು ಹೇಳಿದ್ದಾರೆ. 
ತಾವು ಮುಗ್ಧರು ಎಂಬುದನ್ನು ಪ್ರದರ್ಶಿಸಲು ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ನಾಟಕ ಮಾಡುತ್ತಿದ್ದಾರೆ. ಇದೀಗ ಷರೀಫ್ ಹಾಗೂ ಅವರ ಪುತ್ರಿ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುತ್ತಿದ್ದು, ಎಸಿಗಳ ಸೌಲಭ್ಯವಿಲ್ಲದೆ ಬಿಸಿಲಿನ ಬೇಗೆಯಿಂದೆ ನರಳುತ್ತಿದ್ದಾರೆ. ಈ ರೀತಿ ನಾಟಕ ಮಾಡುವವರನ್ನು ನಾನು ಸಿನಿಮಾಗಳಲ್ಲೂ ನೋಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ