ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಕೀಕೀ ಡ್ಯಾನ್ಸ್ ರೂಪದಲ್ಲಿ ಮತ್ತೆ ಬಂತು ಮಾರಣಾಂತಿಕ ಚಾಲೆಂಜ್: ಕೀಕೀ ಡ್ಯಾನ್ಸ್ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

ಬ್ಲೂ ವೇಲ್ ಚಾಲೆಂಜ್ ನಂತರ ವಿಶ್ವಾದ್ಯಂತ ಕೀಕೀ ಡ್ಯಾನ್ಸ್ ರೂಪದಲ್ಲಿ ಮತ್ತೆ ಮಾರಣಾಂತಿಕ ಚಾಲೆಂಜ್ ಒಂದು ಟ್ರೆಂಡ್ ಆಗುತ್ತಿದ್ದು, ಪೊಲೀಸರು ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹರಸಾಹಸ ಮಾಡುತ್ತಿದ್ದಾರೆ.

ಕೀಕೀ ಡ್ಯಾನ್ಸ್ ರೂಪದಲ್ಲಿ ಮತ್ತೆ ಬಂತು ಮಾರಣಾಂತಿಕ ಚಾಲೆಂಜ್: ಕೀಕೀ ಡ್ಯಾನ್ಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು
Srinivas Rao BV
Updated On : 31 Jul 2018, 12:28 pm
ಬ್ಲೂ ವೇಲ್ ಚಾಲೆಂಜ್ ನಂತರ ವಿಶ್ವಾದ್ಯಂತ ಕೀಕೀ ಡ್ಯಾನ್ಸ್ ರೂಪದಲ್ಲಿ ಮತ್ತೆ ಮಾರಣಾಂತಿಕ ಚಾಲೆಂಜ್ ಒಂದು ಟ್ರೆಂಡ್ ಆಗುತ್ತಿದ್ದು, ಪೊಲೀಸರು ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹರಸಾಹಸ ಮಾಡುತ್ತಿದ್ದಾರೆ. 
ದಿನದಿಂದ ದಿನಕ್ಕೆ ಈ ಕೀಕೀ ಡ್ಯಾನ್ಸ್ ಚಾಲೆಂಜ್ ವೈರಲ್ ಆಗತೊಡಗಿದೆ. ಕೀಕೀ ಚಾಲೆಂಜ್ ಅಥವಾ ಇನ್ ಮೈ ಫೀಲಿಂಗ್ಸ್ ಚಾಲೆಂಜ್ ಅಮೆರಿಕ ರ್ಯಾಪರ್ ಡ್ರೇಕ್ಸ್ ನ ಇತ್ತೀಚಿನ ಹಾಡಿನಿಂದ ಪ್ರೇರಿತಗೊಂಡಿದ್ದು, ಚಲಿಸುತ್ತಿರುವ ಕಾರಿನ ಜೊತೆಗೆ ರಸ್ತೆಯಲ್ಲಿ ನೃತ್ಯ ಮಾಡುವುದು ಈ ಚಾಲೆಂಜ್ ನ ಟಾಸ್ಕ್ ಆಗಿದೆ.  ಕೀಕೀ ಡು ಯು ಲವ್ ಮೀ... ಸಾಂಗ್ ಚಾಲೆಂಜ್ ಅತ್ಯಂತ ಅಪಾಯಕಾರಿಯಾಗಿದ್ದು ಈಗ ವಿಶ್ವಾದ್ಯಂತ ಪೊಲೀಸರ ನಿದ್ದೆಗೆಡಿಸಿದೆ. 
ಏನಿದು ಕೀಕೀ ಚಾಲೆಂಜ್?

Advertisement

Advertisement

ಮೇಲೆ ಓದಿದಂತೆ ಚಲಿಸುತ್ತಿರುವ ಕಾರಿನ ಜೊತೆಗೆ ರಸ್ತೆಯಲ್ಲಿ ನೃತ್ಯ ಮಾಡುವುದಷ್ಟೇ ಈ ಚಾಲೆಂಜ್ ನ ಟಾಸ್ಕ್ ಆಗಿದ್ದರೆ ಬಹುಶಃ ಹೆಚ್ಚಿನ ಅಪಾಯ ಇರುತ್ತಿರಲಿಲ್ಲವೇನೋ.. ಆದರೆ ಟಾಸ್ಕ್ ನ ಮತ್ತೊಂದು ಭಾಗವಾಗಿರುವ ನೃತ್ಯ ಮಾಡುತ್ತಾ ಚಲಿಸುತ್ತಿರುವ ಕಾರಿನೊಳಗೆ ವಾಪಸ್ ಜಿಗಿದು ಕುಳಿತುಕೊಳ್ಳಿವ ಭಾಗ ಅತ್ಯಂತ ಅಪಾಯಕಾರಿಯಾಗಿದೆ.  ನಿಧಾನಗತಿಯಲ್ಲಿರುವ ಕಾರಿನಿಂದ ಕೆಳಗೆ ಜಿಗಿದು ಇನ್ ಮೈ ಫೀಲಿಂಗ್ಸ್ ಹಾಡಿನ ಕೆಲವು ಸಾಲುಗಳಿಗೆ ನೃತ್ಯ ಮಾಡಬೇಕು, ನಂತರ ವಾಪಸ್ ಕಾರಿನೊಳಗೆ ಜಿಗಿದು ಕುಳಿತುಕೊಳ್ಳಬೇಕು ಇದೇ ಚಾಲೆಂಜ್ ನ ಟಾಸ್ಕ್. 

ವೈರಲ್ ಆಗಿದ್ದು ಹೇಗೆ?
ಕೀಕೀ ಡು ಯು ಲವ್ ಮೀ ಹಾಡನ್ನು ಕೆನಡಾದ ರ್ಯಾಪರ್ ರಚಿಸಿದ್ದಾದರೂ, ಹಾಸ್ಯ ಕಲಾವಿದರಾದ ಶಿಗ್ಗಿ, ಅಮೆರಿಕದ ಫುಟ್ ಬಾಲ್ ಆಟಗಾರ ಓಡೆಲ್ ಬೆಕ್ಹ್ಯಾಮ್ ಜೂನಿಯರ್ ಸೇರಿದಂಟೆ ಹಲವು ಸೆಲಬ್ರಿಟಿಗಳು  ಜೂ.30 ರಿಂದ ಈ ಹಾಡಿಗೆ ಚಲಿಸುತ್ತಿರುವ ಕಾರಿನೊಂದಿಗೆ ನೃತ್ಯ ಮಾಡಿದ್ದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದರು. 
ಈ ಅಪಾಯಕಾರಿ ಯತ್ನದಿಂದ ಹಲವರು ಗಾಯಗೊಂಡಿದ್ದರೆ, ಈ ಚಾಲೆಂಜ್ ನ್ನು ಸ್ವೀಕರಿಸಿ ನೃತ್ಯ ಮಾಡುತ್ತಿದ್ದಾಗ ಮಹಿಳೆಯ ಹ್ಯಾಂಡ್ ಬ್ಯಾಗ್ ನ್ನು ಕಿಡಿಗೇಡಿಗಳು ದೋಚಿರುವ ಘಟನೆಯೂ ನಡೆದಿದೆ. ಈ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಪೊಲೀಸರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ತಲೆನೋವು ಎದುರಾಗಿದೆ. ಭಾರತದಲ್ಲೂ ಮುಂಬೈ, ಉತ್ತರ ಪ್ರದೇಶ, ಬೆಂಗಳೂರು ನಗರಗಳ ಪೊಲೀಸರು  ಕೀಕೀ ಡ್ಯಾನ್ಸ್ ಚಾಲೆಂಜ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಈ ರೀತಿಯ ಯತ್ನಗಳನ್ನು ಮಾಡದಂತೆ ಜನರಲ್ಲಿ ಮನವಿ ಮಾಡುತ್ತಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement