ಸಾಂದರ್ಭಿಕ ಚಿತ್ರ 
ವಿದೇಶ

ಅಮೆರಿಕಾದ ರಾಜತಾಂತ್ರಿಕ ಸಿಬ್ಬಂದಿಗಳ ನಿಗೂಢ ಅನಾರೋಗ್ಯದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ: ಚೀನಾ

ಕ್ಯೂಬಾದಲ್ಲಿ ತಮ್ಮ ಸಿಬ್ಬಂದಿಗಳು ಬಳಲುತ್ತಿರುವಂತೆ ರಹಸ್ಯ ಖಾಯಿಲೆಯಿಂದ ಬಳಲುತ್ತಿರುವ ಹಲವು ...

ಬೀಜಿಂಗ್: ಕ್ಯೂಬಾದಲ್ಲಿ ತಮ್ಮ ಸಿಬ್ಬಂದಿಗಳು ಬಳಲುತ್ತಿರುವಂತೆ ರಹಸ್ಯ ಖಾಯಿಲೆಯಿಂದ ಬಳಲುತ್ತಿರುವ ಹಲವು ರಾಯಭಾರಿಗಳನ್ನು ಚೀನಾದಿಂದ ಸ್ಥಳಾಂತರ ಮಾಡಿರುವ ಅಮೆರಿಕಾ, ತನಿಖೆ ನಡೆಸಿದ್ದು ದಾಳಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ  ಎಂದು ಹೇಳಿದೆ.

ಚೀನಾದಲ್ಲಿರುವ ಅಮೆರಿಕಾ ಸರ್ಕಾರಿ ಉದ್ಯೋಗಿಗಿ ಚೀನಾದಲ್ಲಿ ಆನಾರೋಗ್ಯದಿಂದ ಬಳಲುತ್ತಿದ್ದು ಅದು ಅಮೆರಿಕಾದ ಉದ್ಯೋಗಿಗಳು ಹವಾನಾ, ಕ್ಯೂಬಾದಲ್ಲಿ ಹೊಂದಿರುವ ಅನುಭವಕ್ಕೆ ಸಾಮ್ಯತೆಯನ್ನು ಹೊಂದಿದೆ ಎಂದು ಶ್ವೇತಭವನ ತಿಳಿಸಿದೆ. ಅದು ಇತ್ತೀಚೆಗೆ ನೌಕರರ ಅನಾರೋಗ್ಯದ ಬಗ್ಗೆ ವೈದ್ಯಕೀಯ ದೃಢಪಡಿಕೆ ಬಂದಿತ್ತು.

ಗುವಾಂಗ್ಝೌದಲ್ಲಿನ ಅದರ ದೂತಾವಾಸ ಕಚೇರಿಯ ಕೆಲಸಗಾರನು ಸೂಕ್ಷ ಮತ್ತು ಅಸ್ಪಷ್ಟ ಕಾಯಿಲೆಗಳಿಗೆ ಬಲಿಯಾಗುತ್ತಿದ್ದು, ಕಚೇರಿಯಲ್ಲಿ ಅಸಹಜ ಶಬ್ಧ ಮತ್ತು ಒತ್ತಡಗಳು ಬರುತ್ತಿವೆ ಎಂದು ಅಮೆರಿಕ ಸರ್ಕಾರ ಹೇಳಿದೆ.

ರಾಯಭಾರ ಕಚೇರಿಯಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅಮೆರಿಕಾ, ತನ್ನ ಎಲ್ಲಾ ನೌಕರರ ಮತ್ತು ಅವರ ಕುಟುಂಬದವರ ವೈದ್ಯಕೀಯ ತಪಾಸಣೆ ಮಾಡಿತ್ತು. ಅದಕ್ಕಾಗಿ ವೈದ್ಯಕೀಯ ತಂಡವನ್ನು ಕೂಡ ನಿಯೋಜನೆ ಮಾಡಿತ್ತು. ಇನ್ನು ಕೂಡ ಅಗತ್ಯವಿರುವ ಸಿದ್ದಂದಿಗಳಿಗೆ ವೈದ್ಯಕೀಯ ತಪಾಸಣೆ ಮುಂದುವರಿದಿದೆ ಎಂದು ಅಮೆರಿಕಾ ಸರ್ಕಾರದ ವಕ್ತಾರ ಹೀದರ್ ನೌರ್ಟ್ ತಿಳಿಸಿದ್ದಾರೆ.

ಕೆಲವು ಸಿಬ್ಬಂದಿಯನ್ನು ಇನ್ನಷ್ಟು ಪರೀಕ್ಷೆಗೆ ಕಳುಹಿಸಲಾಗಿದೆ. ಅಮೆರಿಕಾದಲ್ಲಿ ಅವರ ರೋಗಲಕ್ಷಣಗಳ ಸಂಶೋಧನೆ ಮತ್ತು ಸಮಗ್ರ ಮೌಲ್ಯಮಾಪನ ನಡೆಯುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಅಮೆರಿಕಾದ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರರು, ಕಳೆದ ಮೇ 23ರ ಆರೋಪಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿದ್ದು ಯಾವುದೇ ಸುಳಿವು ಸಿಕ್ಕಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT