ಎಸ್ ಸಿ ಓ ಪ್ರಧಾನ ಕಾರ್ಯದರ್ಶಿ, ಪ್ರಧಾನಿ ಮೋದಿ 
ವಿದೇಶ

ನರೇಂದ್ರ ಮೋದಿ ಜೊತೆಗೆ ಎಸ್ ಸಿ ಓ ಪ್ರಧಾನ ಕಾರ್ಯದರ್ಶಿ ಮಾತುಕತೆ: ಭಾರತದ ಕೊಡುಗೆ ಶ್ಲಾಘನೆ

ಶಾಂಘೈ ಸಹಕಾರ ಸಂಘಟನೆಯ 18 ನೇ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಚೀನಾಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಎಸ್ ಸಿ ಓ ಪ್ರಧಾನ ಕಾರ್ಯದರ್ಶಿ ರಷೀದ್ ಅಲಿಮೊವ್ ಮಾತುಕತೆ ನಡೆಸಿದ್ದಾರೆ

ಸ್ಯಾನ್ ಡಾಂಗ್ :  ಶಾಂಘೈ ಸಹಕಾರ ಸಂಘಟನೆಯ  18 ನೇ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಚೀನಾಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಎಸ್ ಸಿ ಓ ಪ್ರಧಾನ ಕಾರ್ಯದರ್ಶಿ  ರಷೀದ್ ಅಲಿಮೊವ್  ಮಾತುಕತೆ ನಡೆಸಿದ್ದು, ಸಂಘಟನೆಗೆ ಸಂಬಂಧಿಸಿದಂತೆ ಭಾರತದ ಕಾರ್ಯಚಟುವಟಿಕೆ ಹಾಗೂ ಕೊಡುಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರಾವಳಿ ತೀರ ಪ್ರದೇಶ ಚೀನಾದ ಸ್ಯಾನ್ ಡಾಂಗ್ ನಲ್ಲಿ ಪ್ರಧಾನಿ ನರೇಂದ್ರಮೋದಿ ಆಗಮಿಸಿದ ನಂತರ  ಪ್ರಧಾನಿ ನರೇಂದ್ರಮೋದಿ ಅವರೊಂದಿಗೆ ಮಾತುಕತೆ ನಡೆಸಿದ ರಷೀದ್ ಅಲಿಮೊವ್,  2017ರಲ್ಲಿ ಭಾರತ ಎಸ್ ಸಿ ಓದ ಪೂರ್ಣ ಸದಸ್ಯತ್ವ ಪಡೆದ ನಂತರ  ಸಾಕಷ್ಟು ಕೊಡುಗೆ ನೀಡಿರುವುದಾಗಿ ತಿಳಿಸಿದ್ದಾರೆ  ಎಂದು  ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

ಮೋದಿ ಜೊತೆಗಿನ ಸಭೆಯಲ್ಲಿ  ಜೂನ್. 16 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು  ಬೀಜಿಂಗ್ ನಲ್ಲಿರುವ ಎಸ್ ಸಿಓದ  ಪ್ರಧಾನ ಕಚೇರಿಯಲ್ಲಿ ಆಚರಿಸಲು  ಆಲಿಮೊವ್  ತಿಳಿಸಿದ್ದಾರೆ.

 ಇದೇ ಮೊದಲ ಬಾರಿಗೆ ಭಾರತದ ಪ್ರಧಾನಮಂತ್ರಿ  ಎಸ್  ಸಿ ಓ ಶೃಂಗಸಭೆಯಲ್ಲಿ  ಪಾಲ್ಗೊಂಡಿದ್ದಾರೆ.  8 ರಾಷ್ಟ್ರಗಳು  ಇದರ ಸದಸ್ಯ ರಾಷ್ಟ್ರಗಳಾಗಿವೆ.



Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ಶಿವಮೊಗ್ಗ: 10 ಕಿಲೋ ವ್ಯಾಟ್ FM ಟ್ರಾನ್ಸ್ಮಿಟರ್ ಕೇಂದ್ರ ಉದ್ಘಾಟನೆ! ಆಕಾಶವಾಣಿ, ದೂರದರ್ಶನ ಅಭಿವೃದ್ದಿಗೆ 2,500 ಕೋಟಿ ಹಣ ವೆಚ್ಚ- ಡಾ. ಎಲ್ ಮುರುಗನ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

SCROLL FOR NEXT