ವಿದೇಶ

ಪಾಕ್ ಮಾಜಿ ಪ್ರಧಾನಿ ನಾವಾಜ್ ಷರೀಫ್ ಮೇಲೆ ಶೂ ಎಸೆತ

Lingaraj Badiger
ಲಾಹೋರ್: ಲಾಹೋರ್ ನಲ್ಲಿ ಭಾನುವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಪಿಎಂಎಲ್ -ಎನ್ ನಾಯಕ ಹಾಗೂ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿ ಮೇಲೆ ಶೂ ಎಸೆಯಲಾಗಿದೆ ಎಂದು ಪಾಕ್ ಮಾಧ್ಯಮ ವರದಿ ಮಾಡಿದೆ.
ವ್ಯಕ್ತಿಯೊಬ್ಬ  ಎಸೆದ ಶೂ ಪಾಕ್ ಮಾಜಿ ಪ್ರಧಾನಿಯ ಭಜದ ಮೇಲೆ ಬಿದ್ದಿದೆ ಎಂದು ದಿ ಎಕ್ಸ್ ಪ್ರೆಸ್ ಟ್ರಿಬ್ಯುನ್ ವರದಿ ಮಾಡಿದೆ.
ನವಾಜ್ ಷರೀಫ್ ಮೇಲೆ ಶೂ ಎಸೆದ ವ್ಯಕ್ತಿಯನ್ನು ಜಾಮಿಯಾ ನೆಯೆಮಿಯಾ ಸೆಮಿನರಿಯ ಮಾಜಿ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಮಾಜಿ ಪ್ರಧಾನಿ ಮೇಲೆ ಶೂ ಎಸೆದ ತಲ್ಹಾ ಮುನಾವರ್ ಮೇಲೆ ಪಿಎಂಎಲ್-ಎನ್  ಪಕ್ಷದ ಕಾರ್ಯಕರ್ತರು ಹಲ್ಲೆ ನಡೆಸಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.
SCROLL FOR NEXT