ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಚೀನಾದಿಂದ ಪಾಕಿಸ್ತಾನಕ್ಕೆ ಕ್ಷಿಪಣಿ ಟ್ರ್ಯಾಕಿಂಗ್ ವ್ಯವಸ್ಥೆ!

ಬಹು ಸಿಡಿತಲೆಗಳನ್ನು ಉತ್ಪಾದಿಸುವುದಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಚೀನಾ ತನ್ನ ಪರಮಾಪ್ತ ರಾಷ್ಟ್ರ ಪಾಕಿಸ್ತಾನಕ್ಕೆ ಮಿಸೈಲ್ ಟ್ರ್ಯಾಕಿಂಗ್ ಸಿಸ್ಟಮ್ ನ್ನು ನೀಡಿದೆ.

ಚೀನಾದಿಂದ ಪಾಕಿಸ್ತಾನಕ್ಕೆ ಕ್ಷಿಪಣಿ ಟ್ರ್ಯಾಕಿಂಗ್ ವ್ಯವಸ್ಥೆ!
Srinivas Rao BV
Updated On : 22 Mar 2018, 5:58 am
ಬೀಜಿಂಗ್: ಬಹು ಸಿಡಿತಲೆಗಳನ್ನು ಉತ್ಪಾದಿಸುವುದಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಚೀನಾ ತನ್ನ ಪರಮಾಪ್ತ ರಾಷ್ಟ್ರ ಪಾಕಿಸ್ತಾನಕ್ಕೆ ಮಿಸೈಲ್ ಟ್ರ್ಯಾಕಿಂಗ್ ಸಿಸ್ಟಮ್ ನ್ನು ನೀಡಿದೆ. 
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಚೀನಾದ ಥಿಂಕ್ ಟ್ಯಾಂಕ್ ನ್ನು ಉಲ್ಲೇಖಿಸಿದ್ದು, ಪಾಕಿಸ್ತಾನಕ್ಕೆ ಈ ಅತಿ ಸೂಕ್ಷ್ಮ ಉಪಕರಣವನ್ನು ನೀಡಿರುವ ಮೊದಲ ರಾಷ್ಟ್ರ ಚೀನಾ ಎಂದು ಹೇಳಿದೆ. ಭಾರತದ ವಿರೋಧಿಯಾಗಿರುವ ಪಾಕಿಸ್ತಾನಕ್ಕೆ ಚೀನಾ ಅತಿ ದೊಡ್ಡ ಶಸ್ತ್ರಾಸ್ತ್ರ ಪೂರೈಕೆ ಮಾಡುವ ರಾಷ್ಟ್ರವಾಗಿದ್ದು, ಚೀನಾದ ಸಂಶೋಧನಾ ಸಂಸ್ಥೆಗಳ ಪ್ರಕಾರ ಪಾಕಿಸ್ತಾನದ ಮಿಸೈಲ್ ವ್ಯವಸ್ಥೆಯನ್ನು ಪಾಕಿಸ್ತಾನ ಇತ್ತೀಚೆಗಷ್ಟೇ ಅಳವಡಿಸಿದೆ ಎಂದು ತಿಳಿದುಬಂದಿದೆ. 
ಮಿಸೈಲ್ ಟ್ರ್ಯಾಕಿಂಗ್ ಸಿಸ್ಟಮ್ ನ್ನು ಅಳವಡಿಕೆ ಮಾಡಲು ಚೀನಾ 3 ತಿಂಗಳು ಪಾಕಿಸ್ತಾನದಲ್ಲೇ ಇದ್ದು ವಿಐಪಿ ಸೌಕರ್ಯಗಳನ್ನು ಪಡೆದಿದ್ದು ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಮಿಸೈಲ್ ಟ್ರ್ಯಾಕಿಂಗ್ ಸಿಸ್ಟಮ್ ಕಾರ್ಯನಿರ್ವಹಣೆ ಯಶಸ್ವಿಯಾಗಿದೆ ಎಂದು ಚೀನಾ ಮಾಧ್ಯಮಗಳು ತಿಳಿಸಿವೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement