ಬೀಜಿಂಗ್: ಚೀನಾ ಹಾಗೂ ಪಾಕಿಸ್ತಾನ ಪರಸ್ಪರ ರಕ್ಷಣಾ ಸಹಕಾರವನ್ನು ವೃದ್ಧಿಸುವುದಕ್ಕಾಗಿ ನ.04 ರಂದು ಒಪ್ಪಂದ ಮಾಡಿಕೊಂಡಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಚೀನಾ ಪ್ರಧಾನಿಯೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಈಗಾಗಲೇ ಚೀನಾ ಪಾಕಿಸ್ತಾನಕ್ಕೆ ಅಗತ್ಯವಿರುವ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದೆ. ಈ ಬೆನ್ನಲ್ಲೇ ಚೀನಾ- ಪಾಕಿಸ್ತಾನ ರಕ್ಷಣಾ ಸಹಕಾರವನ್ನೂ ವೃದ್ಧಿಸುವ ತೀರ್ಮಾನಕ್ಕೆ ಉಭಯ ನಾಯಕರೂ ಬಂದಿದ್ದಾರೆ.
ದ್ವಿಪಕ್ಷೀಯ ಮಾತುಕತೆ ವೇಳೆ, ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಪಾಕಿಸ್ತಾನದ ಪ್ರಯತ್ನಗಳನ್ನು ಚೀನಾ ನಾಯಕತ್ವ ಮೆಚ್ಚಿದೆ. ಇದೇ ವೇಳೆ ಸಿಪಿಇಸಿ ಕುರಿತಾಗಿ ನಡೆಯುತ್ತಿರುವ ನಕಾರಾತ್ಮಕ ಪ್ರಚಾರವನ್ನೂ ಉಭಯ ನಾಯಕರೂ ಖಂಡಿಸಿದ್ದು, ಯೋಜನೆಗೆ ಎದುರಾಗುವ ಎಲ್ಲಾ ರೀತಿಯ ಅಡೆತಡೆಗಳನ್ನೂ ಎದುರಿಸುವುದಾಗಿ ಚೀನಾ-ಪಾಕ್ ಪ್ರಧಾನಿಗಳು ಹೇಳಿದ್ದಾರೆ.