ವಿದೇಶ

ಪಾಕಿಸ್ತಾನ: ಮಾರುಕಟ್ಟೆಯಲ್ಲಿ ತರಕಾರಿ ಪೆಟ್ಟಿಗೆಯಲ್ಲಿ ಬಾಂಬ್ ಇಟ್ಟು 20 ಜನರ ಹತ್ಯೆ

Nagaraja AB

ಪಾಕಿಸ್ತಾನ:  ಪಾಕಿಸ್ತಾನದ ವಾಯುವ್ಯ ಬುಡಕಟ್ಟು ಪ್ರದೇಶದಲ್ಲಿನ ಜನನಿಬಿಡ ಮಾರುಕಟ್ಟೆಯಲ್ಲಿ ತರಕಾರಿ ಪೆಟ್ಟಿಗೆಯಲ್ಲಿ ಇಟ್ಟಿದ್ದ ಬಾಂಬ್ ಸ್ಪೋಟಗೊಂಡು ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ ಮತ್ತು 50 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಯೈಟ್ ಪ್ರಾಬಲ್ಯದ ಒರಾಜೈ ಬುಡಕಟ್ಟು ಜಿಲ್ಲೆಯ ಕಲ್ಯಾಣ ಪಟ್ಟಣದಲ್ಲಿ ಪ್ರತಿ ಶುಕ್ರವಾರ ನಡೆಯುತ್ತಿದ್ದ ಬಜಾರ್ ನಲ್ಲಿ ಈ ದಾಳಿ ನಡೆದಿದೆ ಎಂದು ಹಿರಿಯ ಸ್ಥಳೀಯ ಅಧಿಕಾರಿ ಖಲೀದ್ ಇಕ್ಬಲ್  ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ ತರಕಾರಿ ಪೆಟ್ಟಿಗೆಯಲ್ಲಿ ಇಡಲಾಗಿದ ಬಾಂಬ್ ಸ್ಟೋಟಿಸಿ ಈ ದುರ್ಘಟನೆ ಸಂಭವಿಸಿರುವುದಾಗಿ ಅವರು  ಹೇಳಿದ್ದಾರೆ. ಸಾವಿನ ಸಂಖ್ಯೆಯನ್ನು ಎರಡನೇ ಅಧಿಕಾರಿ ಅಲಿ ಜಾನ್ ದೃಢಪಡಿಸಿದ್ದಾರೆ.

ಒರಾಜೈ ಅಪ್ಘಾನ್ ಗಡಿಯಲ್ಲಿನ ಬುಡಕಟ್ಟು ವಲಯವಾಗಿದ್ದು, ವಿಶ್ವದಲ್ಲಿಯೇ ಅತಿ ಹೆಚ್ಚಿನ ಅಪಾಯಕಾರಿ ಪ್ರದೇಶ ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ  ಕರೆದಿದ್ದರು.
ಇಲ್ಲಿ ಅಪ್ಘಾನ್ ತಾಲಿಬಾನ್ ಹಾಗೂ ಅಲ್ ಖೈದಾ ಸೇರಿದಂತೆ ಮತ್ತಿತರ ಉಗ್ರರು ಇಲ್ಲಿ ರಕ್ಷಣೆ ನೀಡಲಾಗಿದೆ ಎಂದು ಅಮೆರಿಕಾ ಹೇಳುತ್ತಿದ್ದರೂ ಪಾಕಿಸ್ತಾನ ನಿರಾಕರಿಸುತ್ತಿದೆ.
SCROLL FOR NEXT