ಸುಂದರ್ ಪಿಚೈ 
ವಿದೇಶ

#MeToo ಸುಳಿಯಲ್ಲಿ ಗೂಗಲ್: 2 ವರ್ಷಗಳಲ್ಲಿ 48 ಉದ್ಯೋಗಿಗಳ ತಲೆದಂಡ!

ಕಳೆದ ಎರಡು ವರ್ಷಗಳಲ್ಲಿ 13 ಹಿರಿಯ ಅಧಿಕಾರಿಗಳು ಸೇರಿ ಒಟ್ಟು 48 ಉದ್ಯೋಗಿಗಳನ್ನು ಲೈಂಗಿಕ ದೌರ್ಜನ್ಯ ಆರೋಪದ ಕಾರಣ ಸಂಸ್ಥೆಯಿಂದ ವಜಾಗೊಳಿಸಲಾಗಿದೆ ಎಂದು ಪ್ರಖ್ಯಾತ ಸರ್ಚ....

ಸ್ಯಾನ್ ಫ್ರಾನ್ಸಿಸ್ಕೋ: ಕಳೆದ ಎರಡು ವರ್ಷಗಳಲ್ಲಿ 13 ಹಿರಿಯ ಅಧಿಕಾರಿಗಳು ಸೇರಿ ಒಟ್ಟು 48  ಉದ್ಯೋಗಿಗಳನ್ನು ಲೈಂಗಿಕ ದೌರ್ಜನ್ಯ ಆರೋಪದ ಕಾರಣ ಸಂಸ್ಥೆಯಿಂದ ವಜಾಗೊಳಿಸಲಾಗಿದೆ ಎಂದು ಪ್ರಖ್ಯಾತ ಸರ್ಚ್ ಇಂಜಿನ್ ಸಂಸ್ಥೆ ಗೂಗಲ್ ಹೇಳಿದೆ.
ಅಮೆರಿಕಾ ಮೂಲದ ಟೆಕ್ ಸಂಸ್ಥೆ ಗೂಗಲ್ ಈ ಸಂಬಂಧ ಗುರುವಾರ ಹೇಳಿಕೆ ಬಿಡುಗಡೆಗೊಳಿಸಿದ್ದು ಸಂಸ್ಥೆಯ ಸಿಇಓ  ಸುಂದರ್ ಪಿಚೈ ಅವರ ಹೇಳಿಕೆಯೊಂದನ್ನು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ್ದು ಹಿರಿಯ ಗೂಗಲ್ ಉದ್ಯೋಗಿ, ಆಂಡ್ರಾಯ್ಡ್ ಸೃಷ್ಟಿಕರ್ತ ಆಂಡಿ ರೂಬಿನ್, ಸಹ ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿದ್ದು ಅವರು 90 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ನಿರ್ಗಮನ ಪ್ಯಾಕೇಜ್ ಅನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದೆ.
ಎಎಫ್ ಪಿ ಹಾಗೂ ಇತರೆ ಮಾದ್ಯಮಗಳು ಕೇಳಿರುವ ಪ್ರಶ್ನೆಗೆ ಪ್ರತಿಯಾಗಿ ಗೂಗಲ್ ಈಏಲ್ ಸಂದೇಶವನ್ನು ಬಹಿರಂಗಗೊಳಿಸಿದ್ದು ಇದರಲ್ಲಿ ಪಿಚೈ ಉದ್ಯೋಗಿಗಳಿಗೆ ನಿಡಿದ್ರುವ ಸಂದೇಶವಿದೆ."ಕಳೆದ ಎರಡು ವರ್ಷಗಳಿಂದ ಸಂಸ್ಥೆಯಲ್ಲಿದ್ದ 13  ಹಿರಿಯ ಅಧಿಕಾರಿಗಳು ಸೇರಿ ಒಟ್ಟು 48 ಮಂದಿ ಲೈಂಗಿಕ ದೌರ್ಜನ್ಯ ಆರೋಪದಿದಾಗಿ ವಜಾಗೊಂಡಿದ್ದಾರೆ. ಇವರಲ್ಲಿ ಯಾರಿಗೆ ಸಹ ಎಕ್ಸಿಟ್ ಪ್ಯಾಕೇಜ್ (ನಿರ್ಗಮನ ಪ್ಯಕೇಜ್) ನೀಡಲಾಗಿಲ್ಲ.
"ಇತ್ತೀಚಿನ ವರ್ಷಗಳಲ್ಲಿ, ನಾವು ಹೆಚ್ಚಿನ ಬದಲಾವಣೆಗಳನ್ನು ಮಾಡಿದ್ದೇವೆ, ಅಧಿಕಾರವನ್ನು ಹೊಂದಿರುವ ಜನರ ಅನುಚಿತ ವರ್ತನೆಯ ಮೇಲೆ ಹೆಚಿನ ಕಟ್ಟು ನಿಟ್ಟಾದ ಕ್ರಮ ಜರುಗಿಸುತ್ತಿದ್ದೇವೆ" ಪಿಚೈ ಹೇಳಿದ್ದಾರೆ.
"ನಾವು ಉದ್ಯೋಗಿಗಳಿಗೆ ಹೆಚ್ಚು ಸುರಕ್ಷಿತವಾದ ಂತರ್ಗತ ಕಾರ್ಯಕ್ಷೇತ್ರವನ್ನು ಒದಗಿಸುತ್ತೇವೆ ಎನ್ನುವುದನ್ನು ನಾನು ಒತ್ತಿ ಹೇಳುತ್ತೇನೆ.ಇದಕ್ಕಾಗಿ ಣಾವು ಗಂಭೀರ ಪ್ರಯತ್ನದಲ್ಲಿದ್ದೇವೆ.
"ಲೈಂಗಿಕ ದೌರ್ಜನ್ಯ ಅಥವಾ ಸೂಕ್ತವಲ್ಲದ ನಡವಳಿಕೆಯ ಕುರಿತು ಪ್ರತಿಯೊಂದು ದೂರುಗಳನ್ನು ನಾವು ಪರಿಶೀಲಿಸುತ್ತೇವೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ, ನಾವು ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ"
ಗೂಗಲ್ ನಲ್ಲಿ ಮೀಟೂ!
ಆಂಡ್ರಾಯ್ಡ್ ಇಂಕ್ ಸಂಸ್ಥಾಪಕ ರೂಬಿನ್ ಗೂಗಲ್ ಉದ್ಯೋಗಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರೆನ್ನುವ ನ್ಯೂಯಾರ್ಕ್ ಟೈಮ್ಸ್ ವರದಿಯನ್ವಯ ೨೦೧೩ರಲ್ಲಿ ಅವರು ಗೂಗಲ್ ಉದ್ಯೋಗಿಯೊಡನೆ ಸೆಕ್ಸ್ ಗಾಗಿ ಒತ್ತಾಯಿಸಿದ್ದರು. ತನಿಖೆ ನಡೆಸಿದ ಗೂಗಲ್ ಸಂಸ್ಥೆ ಅವರಿಗೆ ನಿರ್ಗಮನ ಪ್ಯಾಕೇಜ್ ನೀಡಿ ಸಂಸ್ಥೆಯಿಂದ ವಜಾ ಮಾಡಿತ್ತು.
ಆದರೆ ಈ ಬಗ್ಗೆ ಟ್ವೀಟ್ ಮಾಡಿರುವ ರೂಬಿನ್ ತಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗಿದೆ. ನಾನು ಯಾರೊಡನೆ ಸೆಕ್ಸ್ ಗಾಗಿ ಒತ್ತಾಯ ಮಾಡಿಲ್ಲ. ಇಂತಹಾ ನಡವಳಿಕೆ ತೋರಿಸಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT