ಸಾಂದರ್ಭಿಕ ಚಿತ್ರ 
ವಿದೇಶ

ಚೀನಾ: 3 ತಿಂಗಳಲ್ಲಿ ನೀಲಿಚಿತ್ರ ತಾಣಗಳೂ ಸೇರಿದಂತೆ 4 ಸಾವಿರಕ್ಕೂ ಅಧಿಕ ವೆಬ್ ಸೈಟ್ ಗಳು ಸ್ಥಗಿತ

ಕೇವಲ ಮೂರು ತಿಂಗಳ ಅವಧಿಯಲ್ಲಿ ಚೀನಾದಲ್ಲಿ ಅಶ್ಲೀಲ ವೆಬ್ ಸೈಟ್ ಗಳೂ ಸೇರಿದಂತೆ ಯುವಕರ ಮನಸ್ಸಿನ ಮೇಲೆ ಮಾರಕ ಪರಿಣಾಮ ಬೀರುವ ಸುಮಾರು 4 ಸಾವಿರಕ್ಕೂ ಅಧಿಕ ವೆಬ್ ಸೈಟ್ ಗಳನ್ನು ಸ್ಥಗಿತಗೊಳಿಸಲಾಗಿದೆ.

ಬೀಜಿಂಗ್: ಕೇವಲ ಮೂರು ತಿಂಗಳ ಅವಧಿಯಲ್ಲಿ ಚೀನಾದಲ್ಲಿ ಅಶ್ಲೀಲ ವೆಬ್ ಸೈಟ್ ಗಳೂ ಸೇರಿದಂತೆ ಯುವಕರ ಮನಸ್ಸಿನ ಮೇಲೆ ಮಾರಕ ಪರಿಣಾಮ ಬೀರುವ ಸುಮಾರು 4 ಸಾವಿರಕ್ಕೂ ಅಧಿಕ ವೆಬ್ ಸೈಟ್ ಗಳನ್ನು ಸ್ಥಗಿತಗೊಳಿಸಲಾಗಿದೆ.
ಮೂಲಗಳ ಪ್ರಕಾರ ಚೀನಾದಲ್ಲಿ ಈಗ ಆನ್ ಲೈನ್ ಸ್ವಚ್ಛತಾ ಆಂದೋಲನ ಆರಂಭವಾಗಿದ್ದು, ಅಂತರ್ಜಾಲದಲ್ಲಿ ಕಂಡು ಬರುವ ನಿಯಮಬಾಹಿರ ಮತ್ತು ಅಶ್ಲೀಲ ವೆಬ್ ತಾಣಗಳನ್ನು ಒಂದೊಂದಾಗಿ ಮುಚ್ಚುವ ಕಾರ್ಯದಲ್ಲಿ ಅಲ್ಲಿನ ಸರ್ಕಾರ ನಿರತವಾಗಿದೆ. ಈ ಆನ್ ಲೈನ್ ಸ್ವಚ್ಛತಾ ಆಂದೋಲನದ ಅಶ್ಲೀಲ ದೃಶ್ಯ, ಸಾಹಿತ್ಯ ಪ್ರಕಟಿಸುವ ಎಲ್ಲಾ ರೀತಿಯ ಅಂತರ್ಜಾಲ ತಾಣಗಳ ಹಾಗೂ ಪುಟಗಳ ಮೇಲೆ ಚೀನಾ ಸರ್ಕಾರ ನಿಗಾ ವಹಿಸಿದ್ದು, ಈ ವರೆಗೂ ಸುಮಾರು ಅಶ್ಲೀಲತೆಗೆ ಸಂಬಂಧ ಪಟ್ಟ ಸುಮಾರು 4 ಸಾವಿರಕ್ಕೂ ಅಧಿಕ ವೆಬ್ ಸೈಟ್ ಗಳನ್ನು ಸ್ಥಗಿತಗೊಳಿಸಲಾಗಿದೆ.
ಅಲ್ಲದೆ ಈ ಕಾರ್ಯಕ್ಕಾಗಿ ಚೀನಮಾ ಸರ್ಕಾರ ಈ ವೆಬ್ ಸೈಟ್ ಗಳಿಂದ ಸುಮಾರು 147,000 ದತ್ತಾಂಶ ಮಾದರಿಗಳನ್ನು ಪರಿಶೀಲನೆ ಮಾಡಿದ್ದು, ಆ ಬಳಿಕವೇ ವೆಬ್ ಸೈಟ್ ಗಳನ್ನು ಸ್ಥಗಿತ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ. ಕೇವಲ ಅಶ್ಲೀಲತೆಯನ್ನು ಪ್ರಕಟಿಸುವ ವೆಬ್ ಸೈಟ್ ಗಳು ಮಾತ್ರವಲ್ಲದೇ ಯುವಜನತೆಯನ್ನು ತಪ್ಪುದಾರಿಗೆಳೆಯುವ ಇತರೆ 230ಕ್ಕೂ ಅಧಿಕ ಸಂಸ್ಥೆಗಳಿಗೆ ಸಂಬಂಧಪಟ್ಟ ವೆಬ್ ಸೈಟ್ ಗಳನ್ನು ಕೂಡ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಇದರಲ್ಲಿ ಆನ್ ಲೈನ್ ಕಾದಂಬರಿಗಳು, ಕಥೆಗಳು, ಪ್ರಚೋದನಾಕಾರಿ ಮತ್ತು ಅಶ್ಲೀಲ ಭಾಷಣದ ವಿಡಿಯೋಗಳ ವೆಬ್ ಸೈಟ್ ಗಳು ಕೂಡ ಸೇರಿವೆ.
ಅಂತೆಯೇ ಭವಿಷ್ಯದಲ್ಲಿ ಸರ್ಕಾರದ ಇಂತಹ ಕ್ರಮಗಳು ಮತ್ತಷ್ಟು ಕಠಿಣವಾಗಿರಲಿದೆ ಎಂದು ಚೀನಾ ಸರ್ಕಾರ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT