ಬಾಗ್ದಾದ್: ಸಿರಿಯಾದಲ್ಲಿ ಸಂಘಟನೆಯ ಸೋಲಿಗೆ ಪ್ರತೀಕಾರವಾಗಿ ಶ್ರೀಲಂಕಾದಲ್ಲಿ ದಾಳಿ ನಡೆಸಲಾಗಿದೆ ಎಂದು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಮುಖ್ಯಸ್ಥ ಅಬೂ ಬಕರ್ ಅಲ್-ಬಾಗ್ದಾದಿ ಹೇಳಿದ್ದಾನೆ.
ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿರುವ ಇಸಿಸ್, ವಿಡಿಯೋದಲ್ಲಿ ತನ್ನ ಸಂಘಟನೆ ಮುಖ್ಯಸ್ಥ ಅಬೂ ಬಕರ್ ಅಲ್-ಬಾಗ್ದಾದಿ ಮೂಲಕ ಹೇಳಿಕೆ ಕೊಡಿಸಿದೆ. ಈ ಹಿಂದೆ ಅಮೆರಿಕ ವಾಯು ಸೇನೆಯ ಡ್ರೋಣ್ ದಾಳಿಯಲ್ಲಿ ಬಾಗ್ದಾದಿ ಸಾವನ್ನಪ್ಪಿದ್ದ ಎಂದು ಹೇಳಲಾಗಿತ್ತಾದರೂ, ಆತ ಸಾವನ್ನಪ್ಪಿಲ್ಲ ಇನ್ನೂ ಜೀವಂತವಾಗಿದ್ದಾನೆ ಎಂದು ತಿಳಿದುಬಂದಿದೆ.
ಇಸಿಸ್ ನ ಈ ವಿಡಿಯೋದಲ್ಲಿ ಅರೇಬಿಕ್ ಭಾಷೆಯಲ್ಲಿ ಮಾತನಾಡಿರುವ ಬಾಗ್ದಾದಿ ಶ್ರೀಲಂಕಾದ ದಾಳಿಯ ಕುರಿತೂ ಉಲ್ಲೇಖಿಸಿದ್ದು, ಸಿರಿಯಾದಲ್ಲಿನ ಇಸಿಸ್ ಸೋಲಿಗೆ ಪ್ರತೀಕಾರವಾಗಿ ಶ್ರೀಲಂಕಾದಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
'ಬಘೌಝ್ ನ ಯುದ್ಧ ಇಲ್ಲಿಗೆ ಮುಕ್ತಾಯವಾಗಿದೆ. ಶ್ರೀಲಂಕಾದಲ್ಲಿ ನಡೆಸಿದ ಸರಣಿ ದಾಳಿಯೂ ಈ ಬಘೌಝ್ ದಾಳಿಗೆ ಪ್ರತಿಕಾರವಾಗಿದೆ. ಪಶ್ಚಿಮ ರಾಷ್ಟ್ರಗಳ ವಿರುದ್ಧ ಯುದ್ಧ ಸುದೀರ್ಘವಾಗಿದೆ. ಹಾಗೂ ಮೃತಪಟ್ಟಿರುವ ಸದಸ್ಯರ ವಿರುದ್ಧ ಸೇಡು ತೀರಿಸಿಕೊಳ್ಳಲು ಯುದ್ಧ ಮುಂದುವರೆಯಲಿದೆ ಎಂದು ಬಾಗ್ದಾದಿ ಎಚ್ಚರಿಸಿದ್ದಾನೆ. ಇನ್ನು ಈ ವಿಡಿಯೋ ಹೊರಬರುತ್ತಿದ್ದಂತೆ ಎಸ್ ಐಟಿ ತಂಡ ಹಾಗೂ ಇರಾಕ್ ನ ತಜ್ಞರ ತಂಡ ಈತ ಬಾಗ್ದಾದಿಯೇ ಅನ್ನೋದನ್ನೂ ಖಚಿತ ಪಡಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos