ವಿದೇಶ

ಕಡಲ್ಗಳ್ಳರಿಂದ 20 ಭಾರತೀಯರ ಅಪಹರಣ

Srinivasamurthy VN

ನವದೆಹಲಿ: ವಾಣಿಜ್ಯ ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದ 20 ಭಾರತೀಯರನ್ನು ಆಫ್ರಿಕಾದ ಪಶ್ಚಿಮ ಕರಾವಳಿ ತೀರದ ಬಳಿ ಕಡಲ್ಗಳ್ಳರು ಅಪಹರಣ ಮಾಡಿದ್ದಾರೆ.

ಅಪಹೃತ ಒತ್ತೆಯಾಳುಗಳ ಬಿಡುಗಡೆಗೆ, ಸುರಕ್ಷತೆಗೆ ವಿಶೇಷ ಗಮನ ಹರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ಭಾರತ ಸರ್ಕಾರ ಈ ವಿಚಾರವನ್ನು ನೈಜೀರಿಯಾ ಸರ್ಕಾರದ ಗಮನಕ್ಕೆ ತಂದಿದೆ ಎನ್ನಲಾಗಿದೆ.

ಹಾಂಕಾಂಗ್ ಮೂಲದ ಹಡಗಿನಲ್ಲಿದ್ದ 18 ಮಂದಿ ಭಾರತೀಯರನ್ನು ಕಡಲ್ಗಳ್ಳರು ನೈಜೀರಿಯಾ ಕರಾವಳಿಯಲ್ಲಿ ಅಪಹರಿಸಿದ 10 ದಿನಗಳಲ್ಲೇ ಅಂಥ ಮತ್ತೊಂದು ಘಟನೆ ವರದಿಯಾಗಿದೆ.

"ಡಿಸೆಂಬರ್ 15ರಂದು ಎಂಟಿ ಡ್ಯೂಕ್ ಹಡಗಿನಲ್ಲಿದ್ದ 20 ಮಂದಿ ಭಾರತೀಯ ಸಿಬ್ಬಂದಿಯನ್ನು ಕಡಲ್ಗಳ್ಳರು ಅಪಹರಿಸಿರುವ ಬಗ್ಗೆ ಆತಂಕಿತರಾಗಿದ್ದೇವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ಇದು ಒಂದು ವರ್ಷದಲ್ಲಿ ಕಡಲ್ಗಳ್ಳರು ಭಾರತೀಯರನ್ನು ಗುರಿ ಮಾಡಿದ ಮೂರನೇ ಘಟನೆಯಾಗಿದೆ. ಈ ವಿಚಾರವನ್ನು ಅಬುಜಾದಲ್ಲಿ ನೈಜೀರಿಯಾ ಅಧಿಕಾರಿಗಳ ಗಮಕ್ಕೆ ತರಲಾಗಿದೆ. ಜತೆಗೆ ಇತರ ನೆರೆ ರಾಷ್ಟ್ರಗಳ ಗಮನಕ್ಕೂ ತರಲಾಗಿದೆ ಎಂದು ವಿವರಿಸಿದ್ದಾರೆ.

ಅಪಹೃತ ಒತ್ತೆಯಾಳುಗಳ ಸುರಕ್ಷತೆಗೆ ಆದ್ಯಗಮನ ಹರಿಸಿ, ನೈಜೀರಿಯಾ ಅಧಿಕಾರಿಗಳು ಮತ್ತು ಇತರ ಹಕ್ಕುದಾರರ ಜತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಕುಮಾರ್ ಹೇಳಿದರು.

SCROLL FOR NEXT