ಪತನಕ್ಕೀಡಾದ ವಿಮಾನ 
ವಿದೇಶ

ಕಜಕಿಸ್ತಾನದಲ್ಲಿ ವಿಮಾನ ಪತನ: ಕನಿಷ್ಛ 14 ಸಾವು

ಕಜಕಿಸ್ತಾನದಲ್ಲಿ ಪ್ರಯಾಣಿಕ ವಿಮಾನವೊಂದು ಪತನವಾಗಿದ್ದು, ಘಟನೆಯಲ್ಲಿ ಕನಿಷ್ಛ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಮಾಟಿ: ಕಜಕಿಸ್ತಾನದಲ್ಲಿ ಪ್ರಯಾಣಿಕ ವಿಮಾನವೊಂದು ಪತನವಾಗಿದ್ದು, ಘಟನೆಯಲ್ಲಿ ಕನಿಷ್ಛ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕಜಕಿಸ್ಥಾನದ ಅಲ್ಮಾಟಿ ನಗರದ ಬಳಿ ವಿಮಾನ ಪತನಗೊಂಡು ಸುಮಾರು 14 ಮಂದಿ ಪ್ರಯಾಣಿಕರು ಅಸುನೀಗಿದ್ದಾರೆ. ವಿಮಾನದಲ್ಲಿ 95 ಮಂದಿ ಪ್ರಯಾಣಿಕರು ಹಾಗೂ 5 ಜನ ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.  ಮೂಲಗಳ ಪ್ರಕಾರ ಪತನಕ್ಕೀಡಾದ ವಿಮಾನವು ರಾಜಧಾನಿ ನೂರ್​​​-ಸುಲ್ತಾನ್​​ಗೆ ಹಾರಾಟ ನಡೆಸುತ್ತಿತ್ತು. ಟೇಕ್​ ಆಫ್​​​ ಆದ ಕೆಲವೇ ನಿಮಿಷಗಳಲ್ಲಿ ವೇಳೆ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತನಕ್ಕೀಡಾದ ಬೇಕ್​ ಏರ್ಲೈನ್ಸ್​​​ಗೆ ಸೇರಿದ ವಿಮಾನ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಬದುಕುಳಿದ ಪ್ರಯಾಣಿಕರನ್ನು ರಕ್ಷಿಸಲಾಗುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬೆಂಜಮಿನ್ ನೆತನ್ಯಾಹು ಮಾಡಿದ ಫೋನ್ ಕರೆಯೇ ಅಮೆರಿಕ-ಇರಾನ್ ಶಾಂತಿ ಮಾತುಕತೆ ಹಳಿತಪ್ಪುವಂತೆ ಮಾಡಿತು'

ಕ್ಷೇತ್ರಗಳ ಮರುವಿಂಗಡಣೆ ಪ್ರಸ್ತಾಪ ಅತ್ಯಂತ ಅಪಾಯಕಾರಿ ಹಾಗೂ ಸಂವಿಧಾನದ ಮೇಲಿನ ದಾಳಿ: ಸೋನಿಯಾ ಗಾಂಧಿ

ರಾಜ್ಯದಲ್ಲಿ ರಣ ಬಿಸಿಲು: 35 ಡಿಗ್ರಿ ತಲುಪಿದ ತಾಪಮಾನ, ಮಳೆ ಮುನ್ಸೂಚನೆ ಇಲ್ಲ ಎಂದ IMD

ಆಗ VOLVO, ಈಗ BMW; ಹಾರುಬೂದಿ ಸಾಗಿಸುತ್ತಿದ್ದ ಲಾರಿ ಉರುಳಿ ಐಶಾರಾಮಿ ಕಾರು ಅಪ್ಪಚ್ಚಿ, Video

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

SCROLL FOR NEXT