ವಿದೇಶ

ಅಫ್ಘಾನಿಸ್ಥಾನದಲ್ಲಿ ಅಮೆರಿಕಾ ವಾಯುದಾಳಿ: ಕಾಸರಗೋಡು ಮೂಲದ ಐಸಿಸ್ ಉಗ್ರ ಸೇರಿ 9 ಸಾವು

Raghavendra Adiga
ಕಾಸರಗೋಡು: ಸಿರಿಯ ಮೂಲದ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ಸ್ (ಐಸಿಸ್)ನ ಕೇರಳ ಘಟಕದ ನಾಯಕ, ಕಾಸರಗೋಡು ಮೂಲದ ರಷೀದ್ ಅಬ್ದುಲ್ಲಾ  ಅಮೆರಿಕಾ ಸೇನೆ ಅಫ್ಘಾನಿಸ್ಥಾನದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹತನಾಗಿದ್ದಾನೆ ಎಂದು ತಿಳಿದುಬಂದಿದೆ.
ಅಫ್ಘಾನಿಸ್ಥಾನದ ಖೊರಸಾನ್‌ ಐಸಿಸ್ ಶಿಬಿರದ ಮೇಲೆ  ನಡೆದ ದಾಳಿಯಲ್ಲಿ  ನಾಲ್ವರು ಮಕ್ಕಳು, ಇಬ್ಬರು ಮಹಿಳೆಯರು ಸೇರಿ ಒಟ್ಟು ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.
ರಷೀದ್ ಕೇರಳದ ಯುವಕರು ಐಸಿಸಿ ಉಗ್ರ ಸಂಘಟನೆಗೆ ಸೇರಲು ಪ್ರೇರಣೆ ನೀಡುತ್ತಿದ್ದ. ಆತ ಸಾಮಾಜಿಕ ತಾಣಗಳಲ್ಲಿ ಪ್ರಚಾರ ನಡೆಸಿದ್ದ. ಟೆಲಿಗ್ರಾಂ ನಂತಹಾ ಅಪ್ಲಿಕೇಶನ್ ಮೂಲಕ ಯುವಕರ ಸಂಬಂಧಿಗಳಿಗೆ ಮಾಹಿತಿ ರವಾನಿಸುತ್ತಿದ್ದ.ಈತ ಇದುವರೆಗೆ ಸುಮಾರು 90ಕ್ಕೂ ಅಧಿಕ ಪ್ರಚೋದನಾಕಾರಿ ಸ್ದ್ವನಿಮುದ್ರಿಕೆಗಳನ್ನು ಟೆಲಿಗ್ರಾಮ್ ನಲ್ಲಿ ಹರಿಬಿಟ್ಟಿದ್ದ ಎಂದು ಎನ್ಐಎ ತನಿಖೆ ಬಹಿರಂಗಪಡಿಸಿದೆ. ಕೇರಳದಿಂದ ಆಫ್ಘಾನಿಸ್ತಾನಕ್ಕೆ ತೆರಳಿದ್ದ 21 ಮಂದಿಗೆ ಈತ ನಾಯಕನಾಗಿದ್ದ. 
ಇದೀಗ ಅಫ್ಘಾನಿಸ್ಥಾನದ ಖೊರಸಾನ್ ಪ್ರಾಂತ್ಯದಲ್ಲಿನ ಐಸಿಸ್ ಉಗ್ರಗಾಮಿಯೊಬ್ಬ ಸಂದೇಶ ರವಾನಿಸಿದು ಅಮೆರಿಕಾ ವೈಮಾನಿಕ ದಾಳಿಯಲ್ಲಿ ರಷೀದ್ ಹತ್ಯೆಯಾಗಿರುವುದನ್ನು ಖಚಿತಪಡಿಸಿದ್ದಾನೆ.
SCROLL FOR NEXT