ವಿದೇಶ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತವಲ್ಲದ ಸದಸ್ಯ ಸ್ಥಾನಕ್ಕೆ ಭಾರತ ಸ್ಪರ್ಧೆ; ಏಷ್ಯಾ-ಫೆಸಿಫಿಕ್ ಬೆಂಬಲ

Sumana Upadhyaya
ಯುನೈಟೆಡ್ ನೇಷನ್ಸ್: ಭಾರತಕ್ಕೆ ಹೆಚ್ಚು ಮಹತ್ವದ ರಾಜತಾಂತ್ರಿಕ ಗೆಲುವು ಮತ್ತು ಅದರ ಜಾಗತಿಕ ಮಟ್ಟಕ್ಕೆ ಸಾಕ್ಷಿಯಾಗಿದೆಯೆಂಬಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಎರಡು ವರ್ಷಗಳಿಗೆ ಭಾರತದ ಶಾಶ್ವತವಲ್ಲದ ಸ್ಥಾನಕ್ಕೆ ಉಮೇದುವಾರಿಕೆಗೆ ವಿಶ್ವಸಂಸ್ಥೆಯಲ್ಲಿ ಏಷ್ಯಾ-ಫೆಸಿಫಿಕ್ ಗುಂಪು ಸರ್ವಾನುಮತದಿಂದ ಅನುಮೋದಿಸಿದೆ.
ಮುಂದಿನ ಎರಡು ವರ್ಷಗಳಿಗೆ 15 ದೇಶಗಳ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 5 ಶಾಶ್ವತವಲ್ಲದ ಸದಸ್ಯ ರಾಷ್ಟ್ರಗಳ ಆಯ್ಕೆಗೆ ಮುಂದಿನ ವರ್ಷ ಜೂನ್ ನಲ್ಲಿ ಚುನಾವಣೆ ನಡೆಯಲಿದೆ. 
ಇದು ಸರ್ನಾನುಮತದ ಹೆಜ್ಜೆ. ಎರಡು ವರ್ಷಗಳ ಅವಧಿಗೆ ಭದ್ರತಾ ಮಂಡಳಿಯಲ್ಲಿ ಶಾಶ್ವತರಹಿತ ಸ್ಥಾನಕ್ಕೆ ಭಾರತದ ಸದಸ್ಯ ಸ್ಥಾನಕ್ಕೆ ವಿಶ್ವಸಂಸ್ಥೆಯಲ್ಲಿನ ಏಷ್ಯಾ-ಫೆಸಿಫಿಕ್ ಗುಂಪು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದೆ. ಎಲ್ಲಾ 55 ಸದಸ್ಯ ರಾಷ್ಟ್ರಗಳಿಗೆ ಧನ್ಯವಾದಗಳು ಎಂದು ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿತ್ವ ರಾಯಭಾರಿ ಸೈಯದ್ ಅಕ್ಬರುದ್ದೀನ್ ಟ್ವೀಟ್ ಮಾಡಿದ್ದಾರೆ.
ಭಾರತದ ಶಾಶ್ವತರಹಿತ ಸದಸ್ಯ ಸ್ಥಾನಕ್ಕೆ ಆಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಚೀನಾ, ಇಂಡೋನೇಷಿಯಾ, ಇರಾನ್, ಜಪಾನ್, ಕುವೈತ್, ಕಿರ್ಗಿಸ್ತಾನ್, ಮಲೇಷಿಯಾ, ಮಾಲ್ಡೀವ್ಸ್, ಮೈನ್ಮಾರ್, ನೇಪಾಳ, ಪಾಕಿಸ್ತಾನ, ಖತಾರ್, ಸೌದಿ ಅರೇಬಿಯಾ, ಶ್ರೀಲಂಕಾ, ಸಿರಿಯಾ, ಟರ್ಕಿ, ಯುಎಇ, ವಿಯೆಟ್ನಾಂ ದೇಶಗಳು ಬೆಂಬಲ ಸೂಚಿಸಿವೆ.
193 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ವಿಶ್ವಸಂಸ್ಥೆಯಲ್ಲಿ ಭದ್ರತಾ ಮಂಡಳಿಯ 5 ಶಾಶ್ವತರಹಿತ ಸದಸ್ಯ ಸ್ಥಾನಗಳಿಗೆ ಪ್ರತಿವರ್ಷ ಎರಡು ವರ್ಷಗಳ ಅವಧಿಗೆ ಚುನಾವಣೆ ನಡೆಯುತ್ತದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾ, ಫ್ರಾನ್ಸ್, ರಷ್ಯಾ, ಯುಕೆ ಮತ್ತು ಯುಎಸ್ ಶಾಶ್ವತ ರಾಷ್ಟ್ರಗಳಾಗಿವೆ.
SCROLL FOR NEXT