ವಿದೇಶ

ಮುಸ್ಲಿಂ ಮಹಿಳೆಯರಿಗೆ ಹಿಜಬ್ ಬೇಡ ಎಂದು ವಾದಿಸಿದ್ದ ವಕೀಲೆಗೆ 38 ವರ್ಷ ಜೈಲು, 148 ಚಡಿ ಏಟು!

Vishwanath S
ಟೆಹ್ರಾನ್: ಮುಸ್ಲಿಂ ಮಹಿಳೆಯರಿಗೆ ಹಿಜಬ್ ಬೇಡ ಎಂದು ವಾದಿಸಿದ್ದ ಇರಾನಿನ ಮಾನವಹಕ್ಕು ವಕೀಲೆ ನಸ್ರೀನ್ ಸೊಟೊಡೆಯವರಿಗೆ ಕೋರ್ಟ್ 38 ವರ್ಷದ ಜೈಲು ಶಿಕ್ಷೆ ಹಾಗೂ 148 ಚಡಿ ಏಟಿನ ಶಿಕ್ಷೆಯನ್ನು ನೀಡಿದೆ. 
ನಸ್ರೀನ್ ಅವರನ್ನು ಕಳೆದು ಎಂಡು ತಿಂಗಳ ಹಿಂದೆ ಬಂಧಿಸಲಾಗಿತ್ತು. ಆದರೆ ಈ ಬಂಧನಕ್ಕೆ ಸರ್ಕಾರ ಯಾವುದೇ ಕಾರಣ ನೀಡಿರಲಿಲ್ಲ. ಆದರೆ ನಸ್ರಿನ್ ಶಿರ ವಸ್ತ್ರವನ್ನು ಬಹಿರಂಗವಾಗಿ ಎಸದೆ ಅಪರಾಧದಡಿಯಲ್ಲಿ ಬಂಧನಕ್ಕೊಳಗಾಗಿದ್ದ ಮಹಿಳಾ ಪ್ರತಿಭಟನಾಕಾರ ಪರ ಕೆಲಸ ಮಾಡುತ್ತಿದ್ದರು. 
ಇನ್ನು ಮಾರ್ಚ್ 11ರಂದು ನಸ್ರೀನ್ ಪತಿ ರೇಝಾ ಖಾನ್ದಾನ್ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ತನ್ನ ಪತ್ನಿಗೆ ಜೈಲು ಶಿಕ್ಷೆಯಾಗಿರುವುದನ್ನು ಬಹಿರಂಗಪಡಿಸಿದ್ದಾರೆ.
ನಸ್ರೀನ್ ಅವರ ವಿರುದ್ಧ ಇರಾನಿನ ಸುರಕ್ಷತೆ ಅಪಾಯಕ್ಕೀಡು ಮಾಡಿದ ಮತ್ತು ಇರಾನ್ ವಿರುದ್ಧ ಬೇಹುಗಾರಿಕೆ ನಡೆಸಿದ ಪ್ರಕರಣಗಳು ದಾಖಲಿಸಲಾಗಿದೆ.
2012ರಲ್ಲಿ ಯುರೋಪಿಯನ್ ಯೂನಿಯನ್ ನ ಮಾನವಹಕ್ಕು ಪುರಸ್ಕಾರಕ್ಕೆ ನಸ್ರೀನ್ ಪಾತ್ರರಾಗಿದ್ದರು.
SCROLL FOR NEXT