ವಿದೇಶ

ಮಸೂದ್ ಅಜರ್ ಜಾಗತಿಕ ಉಗ್ರ: ಪಾಕ್ ಪ್ರತಿಕ್ರಿಯೆ ಏನು ಗೊತ್ತೇ?

Srinivas Rao BV
ಮಸೂದ್ ಅಜರ್ ನ್ನು ಜಾಗತಿಕ ಉಗ್ರನ ಪಟ್ಟಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೇರಿಸಿದ್ದು, ಪಾಕಿಸ್ತಾನ ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ. 
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಘೋಷಣೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ, ಮಸೂದ್ ಅಜರ್ ವಿರುದ್ಧ ವಿಶ್ವಸಂಸ್ಥೆ ಹೇರಿರುವ ನಿರ್ಬಂಧವನ್ನು ತಕ್ಷಣವೇ ಜಾರಿಗೊಳಿಸುವುದಾಗಿ ಹೇಳಿದೆ. 
ಮಸೂದ್ ಅಜರ್ ನ್ನು ಜಾಗತಿಕ ಮಟ್ಟದ ಉಗ್ರ ಎಂದು ಘೋಷಿಸಿ ನಿರ್ಬಂಧ ವಿಧಿಸುವುದಕ್ಕೆ ತಾನು ಒಪ್ಪಿಗೆ ಸೂಚಿಸಿದ್ದಾಗಿಯೂ ಪಾಕಿಸ್ತಾನ ಇದೇ ವೇಳೆ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರ ದಾಳಿ ಬಳಿಕ ಜೈಶ್ ಇ ಮೊಹಮ್ಮದ್ ಉಗ್ರಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರನೆಂದು ಘೋಷಿಸಬೇಕು ಎಂದು ವಿಶ್ವಸಂಸ್ಧೆಯ ಭದ್ರತಾ ಮಂಡಳಿಗೆ ಫ್ರಾನ್ಸ್, ಅಮೆರಿಕ, ಬ್ರಿಟನ್, ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಮನವಿ ಮಾಡಿದ್ದವು. ಆದರೆ ಮಸೂದ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಇದೀಗ ಭಾರತದ ಒತ್ತಡಕ್ಕೆ ಮಣಿದ ಚೀನಾ ಆಕ್ಷೇಪ ಹಿಂಪಡೆದಿದೆ.
ಮಸೂದ್ ಅಜರ್ ನ ವಿರುದ್ಧದ ನಿರ್ಬಂಧವನ್ನು ತಕ್ಷಣವೇ ಜಾರಿಗೊಳಿಸುವುದಾಗಿ ಹೇಳಿರುವ ಪಾಕಿಸ್ತಾನ ಭಯೋತ್ಪಾದನೆ ಜಗತ್ತಿಗೇ ವಿಪತ್ತು ಎಂಬ ತನ್ನ ನಿಲುವಿಗೆ ಬದ್ಧವಾಗಿರುವುದಾಗಿ ಹೇಳಿದೆ. 
SCROLL FOR NEXT