ವಿದೇಶ

ಲಂಡನ್: ಜೂನ್ 27ರವರೆಗೆ ನೀರವ್ ಮೋದಿ ಪೊಲೀಸ್ ಕಸ್ಟಡಿ ವಿಸ್ತರಣೆ

Lingaraj Badiger
ಲಂಡನ್: ಭಾರತೀಯ ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿರುವ ವಜ್ರದ ಉದ್ಯಮಿ ನೀರವ್ ಮೋದಿ ಅವರ ಪೊಲೀಸ್ ಕಸ್ಟಡಿಯನ್ನು ಜೂನ್ 27ರವರೆಗೆ ವಿಸ್ತರಿಸಿ ಬ್ರಿಟನ್ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿದೆ.
ತನ್ನನ್ನು ಭಾರತಕ್ಕೆ ಗಡಿಪಾರು ಮಾಡುವ ಲಂಡನ್ ಸರ್ಕಾರದ ಕ್ರಮವನ್ನು ನೀರವ್ ಮೋದಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಜೊತೆಗೆ, ನೀರವ್ ಮೋದಿಯನ್ನು ಯಾವ ಜೈಲಿನಲ್ಲಿಡಲಾಗುತ್ತದೆ ಎಂಬುದರ ಕುರಿತು 14 ದಿನಗಳಲ್ಲಿ ಮಾಹಿತಿ ನೀಡುವಂತೆ ಭಾರತ ಸರ್ಕಾರಕ್ಕೆ ವ್ಯಾಂಡ್ಸ್ ವರ್ತ್ ನ್ಯಾಯಾಲಯ ಸೂಚಿಸಿದೆ.
ಕಳೆದ ತಿಂಗಳು ಇದೇ ನ್ಯಾಯಾಲಯ, ನೀರವ್ ಮೋದಿ ಮೂರನೇ ಬಾರಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಕಳೆದ ಮಾರ್ಚ್ ತಿಂಗಳಲ್ಲಿ ಬ್ರಿಟನ್ ನ್ಯಾಯಾಲಯ, ಜಾರಿ ನಿರ್ದೇಶನಾಲಯದ ಮನವಿ ಮೇರೆ ನೀರವ್ ಮೋದಿ ವಿರುದ್ಧ ಬಂಧನದ ವಾರಂಟ್ ಜಾರಿ ಮಾಡಿತ್ತು. ನಂತರ, ಸ್ಕಾಟ್ ಲ್ಯಾಂಡ್ ಪೊಲೀಸರು ಮೋದಿಯನ್ನು ಬಂದಿಸಿದ್ದರು.
ನೀರವ್ ಮೋದಿ ವಿರುದ್ಧ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 14 ಸಾವಿರ ಕೋಟಿ ರೂ. ವಂಚಿಸಿದ ಆರೋಪವಿದೆ.
SCROLL FOR NEXT