ವಿದೇಶ

ಭಾರತದ ಹೊಸ ಭೂಪಟ ಕಂಡು ಕಕ್ಕಾಬಿಕ್ಕಿಯಾದ ಪಾಕ್‌ನಿಂದ ತೀವ್ರ ಆಕ್ಷೇಪ

Vishwanath S

ಇಸ್ಲಾಮಾಬಾದ್: ಕೇಂದ್ರ ಸರ್ಕಾರ ಹೊಸದಾಗಿ ಬಿಡುಗಡೆ ಮಾಡಿದ ಭಾರತದ ಭೂಪಟ, ಪಾಕಿಸ್ತಾನದ ನಿದ್ದೆಗೆಡಿಸಿದೆ ಮತ್ತು ಇದನ್ನು ಒಪ್ಪಲಾಗದು ಎಂದು ಪ್ರಬಲ ಆಕ್ಷೇಪ ವ್ಯಕ್ತಪಡಿಸಿದೆ.

ಕಾಶ್ಮೀರ ಸಂಪೂರ್ಣವಾಗಿ ಭಾರತಕ್ಕೆ ಸೇರಿದೆ ಎಂದು ಶನಿವಾರವಷ್ಟೇ ಬಿಡುಗಡೆ ಮಾಡಿದ ಹೊಸ ಭೂಪಟದ ಬಗ್ಗೆ ಪಾಕಿಸ್ತಾನ ಆಕ್ಷೇಪ, ಅಸಮಾಧಾನ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರ ಶನಿವಾರ ಹೊಸ ಪೊಲಿಟಿಕಲ್ ಮ್ಯಾಪ್ ಅನ್ನು ಬಿಡುಗಡೆ ಮಾಡಿದ್ದು, ಅದು 28 ರಾಜ್ಯಗಳು ಹಾಗೂ 9 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.

ಜಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗು ಮುನ್ನ ದೇಶದಲ್ಲಿ ಒಟ್ಟು 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಿದ್ದವು. ಈಗ ರಾಜ್ಯಗಳ ಸಂಖ್ಯೆ 28ಕ್ಕೆ ಇಳಿಕೆಯಾಗಿದೆ. ಹಾಗೆಯೇ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 9 ಏರಿಕೆಯಾಗಿದೆ.

SCROLL FOR NEXT