ತಾಲಿಬಾನ್ ರಾಯಭಾರಿ ಮುಹಮ್ಮದ್ ಸುಹೇಲ್ ಶಾಹೀನ್ 
ವಿದೇಶ

ಭಯ ಪಡುವುದರಲ್ಲಿ ಅರ್ಥವಿಲ್ಲ, ಆಫ್ಘಾನಿಸ್ತಾನ ಮರು ನಿರ್ಮಾಣಕ್ಕೆ ಭಾರತದ ನೆರವು ಬೇಕು; ತಾಲಿಬಾನ್

ಭಾರತ ಸೇರಿದಂತೆ ವಿಶ್ವದ ಇತರ ಯಾವುದೇ ದೇಶಗಳೊಂದಿಗೆ ತಾವು ಮೈತ್ರಿಯನ್ನು ಮಾತ್ರ ಹೊಂದಲು ಪ್ರಯತ್ನಿಸುತ್ತಿದ್ದೇವೆ ಎಂದು ತಾಲಿಬಾನ್ ಸಮೂಹದ ಅಧಿಕೃತ ಪ್ರತಿನಿಧಿ ಮುಹಮ್ಮದ್ ಸುಹೇಲ್ ಶಾಹೀನ್ ಹೇಳಿದ್ದಾರೆ.

ಕಾಬೂಲ್: ಭಾರತ ಸೇರಿದಂತೆ ವಿಶ್ವದ ಇತರ ಯಾವುದೇ ದೇಶಗಳೊಂದಿಗೆ ತಾವು ಮೈತ್ರಿಯನ್ನು ಮಾತ್ರ ಹೊಂದಲು ಪ್ರಯತ್ನಿಸುತ್ತಿದ್ದೇವೆ ಎಂದು ತಾಲಿಬಾನ್ ಸಮೂಹದ ಅಧಿಕೃತ ಪ್ರತಿನಿಧಿ ಮುಹಮ್ಮದ್ ಸುಹೇಲ್ ಶಾಹೀನ್ ಹೇಳಿದ್ದಾರೆ.

ಸೇನಾ ಕ್ರಮಗಳಿಂದ ಏನನ್ನೂ ಸಾಧಿಸಲಾಗದು.. ಶಾಂತಿಯುತ ಚರ್ಚೆಗಳ ಮೂಲಕವೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ತಮ್ಮ ದೇಶದಿಂದ ಅಮೆರಿಕಾ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡ ಮಾತ್ರಕ್ಕೆ ಭಾರತ ಭಯಪಡಬೇಕಾದ ಅಗತ್ಯವಿಲ್ಲ. ಅಫ್ಘಾನಿಸ್ತಾನದಲ್ಲಿ ನಿಯೋಜಿಸಲಾಗಿರುವ ತಮ್ಮ ಸೈನ್ಯದ ಮೇಲೆ ದಾಳಿ ನಡೆಸಲಿದೆ ಎಂದು ತಾಲಿಬಾನ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಯಾರ ಮೇಲೂ ತಾಲಿಬಾನ್ ದಾಳಿ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಿಎನ್‌ಎನ್ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಶಾಹೀನ್ ತಮ್ಮ ನೀತಿಗಳನ್ನು ಸ್ಪಷ್ಟಪಡಿಸಿದರು. ಕಳೆದ 18 ವರ್ಷಗಳಿಂದ ಸೇನೆಯ ಮೂಲಕ ಅಮೆರಿಕಾ ನಡೆಸಿದ ಪ್ರಯತ್ನಗಳು ಯಾವುದೇ ಉತ್ತಮ ಫಲಿತಾಂಶ ನೀಡಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅಫ್ಘಾನಿಸ್ತಾನ ಸಮಸ್ಯೆಗೆ ಅಮೆರಿಕ ಪರಿಹಾರ ಹೊಂದಿದ್ದರೆ, ನಾವು ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧರಿದ್ದೇವೆ. ಆ ರೀತಿ ನಡೆಯದಿದ್ದರೆ ಅವರು ಕಹಿ ಅನುಭವಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಲಿಬಾನ್ ನಮ್ಮ ಸೈನಿಕನನ್ನು ಕೊಂದಿದ್ದಾರೆ ಎಂದು ಟ್ರಂಪ್ ಹೇಳುತ್ತಾರೆ. ಆದರೆ ಅಫ್ಘಾನಿಸ್ತಾನದಲ್ಲಿ ರಕ್ತಪಾತ ಪ್ರಾರಂಭಿಸಿದವರು ಯಾರು? ಅಮೆರಿಕಾ ಪಡೆಗಳು ದಾಳಿ ಮಾಡಿದರೆ, ನಾವು ಪ್ರತಿಯಾಗಿ ತಕ್ಕ ಉತ್ತರ ನೀಡಿದ್ದೇವೆ. ನಾವು ನಮ್ಮ ಜನರ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸಿದ್ದೇವೆ ಎಂದು ಹೇಳಿದ್ದಾರೆ. ಒಪ್ಪಂದಕ್ಕೆ ಸಹಿ ಹಾಕಿದ ಮರುಕ್ಷಣದಲ್ಲಿಯೇ ಅಮೆರಿಕಾ ಸೇನೆ ಮತ್ತೊಮ್ಮೆ ನಮ್ಮ ಮೇಲೆ ದಾಳಿ ನಡೆಸಬಹುದು. ನಾವು ದೇಶದ ಆಂತರಿಕ ಮತ್ತು ಬಾಹ್ಯ ವಿಷಯಗಳ ಬಗ್ಗೆ ಗಮನ ಹರಿಸಲು ಬಯಸುತ್ತೇವೆ. ಅಮೆರಿಕ ಸೈನ್ಯವನ್ನು ಹಿಂದೆಗೆದುಕೊಂಡ ನಂತರ, ದೇಶದ ಆಂತರಿಕ ವ್ಯವಹಾರಗಳ ಬಗ್ಗೆ ನಾವು ಖಂಡಿತವಾಗಿಯೂ ಜನರ ಪರವಾಗಿ ಹೋರಾಡುತ್ತೇವೆ ಎಂದು ಶಾಹೀನ್ ಹೇಳಿದರು.

ಅದೇ ರೀತಿ, ಪಾಕಿಸ್ತಾನ ನೆರವಿನಿಂದ ಅಫ್ಘಾನಿಸ್ತಾನ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ ಎಂಬ ಇಮ್ರಾನ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿ, ತಾವು ಈಗಾಗಲೇ ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ, ನಮಗೆ ಯಾವುದು ಅನುಕೂಲವೂ ಆ ರೀತಿ ನಡೆಯುತ್ತೇವೆ. ಅಮೆರಿಕಾ ತನ್ನ ಪಡೆಗಳನ್ನು ಹಿಂದೆಗೆದುಕೊಂಡ ನಂತರ, ಭಾರತದಲ್ಲಿ ತಾಲಿಬಾನ್ ದಾಳಿ ನಡೆಸಲಿದೆ ಎಂದು ನಡೆಯುತ್ತಿರುವ ಪ್ರಚಾರ ಕುರಿತು ಪ್ರತಿಕ್ರಿಯಿಸಿ, ಯಾರಿಗೂ ತೊಂದರೆ ಕೊಡುವ ಉದ್ದೇಶ ನಾವು ಹೊಂದಿಲ್ಲ, ದೇಶ ಪುನರ್‌ನಿರ್ಮಾನಕ್ಕೆ ಅಂಕಿತ ಹಾಕುತ್ತೇವೆ. ಈ ವಿಷಯದಲ್ಲಿ ಭಾರತದ ಸಹಕಾರ ಅತ್ಯಗತ್ಯ ಎಂದು ಶಾಹಿನ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT