ಇಮ್ರಾನ್ ಖಾನ್ 
ವಿದೇಶ

8 ಮಿಲಿಯನ್ ಕಾಶ್ಮೀರಿ ಜನರನ್ನು ಬೆದರಿಸಲು  9 ಲಕ್ಷ ಸೈನಿಕರ ನಿಯೋಜನೆ- ಇಮ್ರಾನ್ ಖಾನ್ 

ಸೈನಿಕರನ್ನು ಬಳಸಿಕೊಳ್ಳುವ ಮೂಲಕ ಅಮಾಯಕ ಕಾಶ್ಮೀರಿಗಳನ್ನು ಬೆದರಿಸಿ ತನ್ನ ಭೂ ಸ್ವಾಧೀನ ಕಾರ್ಯಸೂಚಿಯನ್ನು ಸಾಧಿಸಿಲು ಪ್ರಧಾನಿ ನರೇಂದ್ರ ಮೋದಿ ಚಿಂತಿಸಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಟೀಕಿಸಿದ್ದಾರೆ.

ಇಸ್ಲಾಮಾಬಾದ್ : ಸೈನಿಕರನ್ನು ಬಳಸಿಕೊಳ್ಳುವ ಮೂಲಕ ಅಮಾಯಕ ಕಾಶ್ಮೀರಿಗಳನ್ನು ಬೆದರಿಸಿ ತನ್ನ ಭೂ ಸ್ವಾಧೀನ ಕಾರ್ಯಸೂಚಿಯನ್ನು ಸಾಧಿಸಿಲು ಪ್ರಧಾನಿ ನರೇಂದ್ರ ಮೋದಿ ಚಿಂತಿಸಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಟೀಕಿಸಿದ್ದಾರೆ.

ಜಮ್ಮು- ಕಾಶ್ಮೀರದಲ್ಲಿ 75 ದಿನಗಳಾದರೂ ನಿರ್ಬಂಧ ಮುಂದುವರೆಸಿರುವ ಮೋದಿ ಆಕ್ರಮಿತ ಸರ್ಕಾರ, ಅಮಾಯಕ ಕಾಶ್ಮೀರಿ ಜನರನ್ನು ಬೆದರಿಸಲು 9 ಲಕ್ಷ ಸೈನಿಕರನ್ನು  ನಿಯೋಜಿಸುವ ಮೂಲಕ ಸ್ವಾಧೀನ ಕಾರ್ಯವನ್ನು ಸಾಧಿಸಲು ಮೋದಿ ತಂತ್ರ ರೂಪಿಸಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ 9 ಲಕ್ಷ ಸೈನಿಕರ ಅಗತ್ಯವಿಲ್ಲ. 8 ಮಿಲಿಯನ್ ಕಾಶ್ಮೀರಿ ಜನರಲ್ಲಿ ಭಯ ಭೀತಿ ಮೂಡಿಸಲಾಗುತ್ತಿದೆ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಯಭೀತರಾಗಿದ್ದಾರೆ ಎಂದಿದ್ದಾರೆ. ಜಮ್ಮು- ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಇಡೀ ವಿಶ್ವ ಗಮನಿಸುತ್ತಿದೆ. ನಿರ್ಬಂಧವನ್ನು ತೆಗೆದರೆ ರಕ್ತದೋಕುಳಿ ನಡೆಯಲಿದೆ ಎಂಬ ಭಯ ಮೋದಿಗೆ ಇದೆ. 
ಇದು ಕಾಶ್ಮೀರಿ ಜನರನ್ನು ನಿಗ್ರಹಿಸುವ ಏಕೈಕ ಮಾರ್ಗವಾಗಿದೆ ಎಂದು ಇಮ್ರಾನ್ ಖಾನ್ ಬರೆದುಕೊಂಡಿದ್ದಾರೆ.

ಭಾರತ ಸರ್ಕಾರ ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿ ನಿರ್ಬಂಧ ಹೇರಿ ಸಂವಹನವನ್ನು ಸ್ಥಗಿತಗೊಳಿಸಿದ ನಂತರ ಆಗಸ್ಟ್ 5 ರಿಂದಲೂ ಆಕ್ರಮಿತ ಕಾಶ್ನೀರದಲ್ಲಿ ಭಯ, ಹತಾಶೆ ಹೆಚ್ಚಾಗಿದೆ. ಮೊಬೈಲ್ ಪೋನ್ ಗಳ ಕರೆ ಹಾಗೂ  ಪಠ್ಯ ಸೇವೆಗಳನ್ನು ಆರಂಭಗೊಂಡಿತಾದರೂ, ಮಂಗಳವಾರದಿಂದ ಪಠ್ಯ ಸೇವೆಗಳನ್ನು ಮತ್ತೆ ನಿರ್ಬಂಧಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿದ್ದ ರಿಗ್ಗಿಂಗ್ ವಾತಾವರಣದಲ್ಲಿ ನಿಜವಾಗಿಯೂ ಕೆಲಸ ಮಾಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ