ಫಿಲಿಪೈನ್ಸ್ ನಲ್ಲಿ ಪ್ರಬಲ ಭೂಕಂಪನ; ರಿಕ್ಚರ್ ಮಾಪಕದಲ್ಲಿ 5.8ರಷ್ಟು ತೀವ್ರತೆ ದಾಖಲು
ದ್ವೀಪರಾಷ್ಟ್ರ ಫಿಲಿಪೈನ್ಸ್ ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು ರಿಕ್ಚರ್ ಮಾಪಕದಲ್ಲಿ ಬರೊಬ್ಬರಿ 5.8ರಷ್ಟು ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.
ಮನಿಲಾ: ದ್ವೀಪರಾಷ್ಟ್ರ ಫಿಲಿಪೈನ್ಸ್ ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು ರಿಕ್ಚರ್ ಮಾಪಕದಲ್ಲಿ ಬರೊಬ್ಬರಿ 5.8ರಷ್ಟು ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಫಿಲಿಪ್ಪೈನ್ಸ್ ನ ಸರಂಗನಿ ಪ್ರಾಂತ್ಯದಲ್ಲಿ ಈ ಭೂಕಂಪನ ಸಂಭವಿಸಿದ್ದು, 3 ವರ್ಷಗಳಿಂದೀಚೆಗೆ ಇಲ್ಲಿ ಸಂಭವಿಸಿದ ಪ್ರಬಲ ಭೂಕಂಪನ ಇದಾಗಿದೆ ಎಂದು ಅಮೆರಿಕದ ಭೂಕಂಪನ ಮಾಪನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಥಳೀಯ ಕಾಲಮಾನ ರಾತ್ರಿ 11.32 ರ ಸಮಯದಲ್ಲಿ ಭೂಕಂಪನ ಸಂಭವಿಸಿದ್ದು, ಭೂಕಂಪನ ಸಂಭವಿಸಿರುವ ಸರಂಗನಿ ಪ್ರಾಂತ್ಯ ಭೂಕಂಪನ ಮತ್ತು ಲಾವಾರಸ ಚಟುವಟಿಕೆಯಿಂದ ಕೂಡಿರುವ ರಿಂಗ್ ಫೈರ್ ಪ್ರದೇಶದಲ್ಲಿದೆ. ಭೂಮಿ ಕಂಪಿಸುವುದು ಸಾಮಾನ್ಯವೇ ಆದರೆ ಈ ಬಾರಿ ಕೊಂಚ ಹೆಚ್ಚಿನ ಪ್ರಮಾಣದಲ್ಲೇ ಭೂಮಿ ಕಂಪಿಸಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಇದೇ ಫೆಸಿಫಿಕ್ ಸಾಗರದಲ್ಲಿ ಲಾವಾರಸ ಉಕ್ಕಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.