ಸಾಂದರ್ಭಿಕ ಚಿತ್ರ 
ವಿದೇಶ

ಮೃಗಾಲಯದಲ್ಲಿದ್ದ ಹುಲಿಗೂ ಕೊರೋನಾ ವೈರಸ್ ಸೋಂಕು, ಇತರೆ 6 ಹುಲಿ, ಸಿಂಹಗಳಿಗೂ ಅನಾರೋಗ್ಯ

ಅಮೆರಿಕದಲ್ಲಿ ಕೊರೋನಾ ವೈರಸ್ ಆರ್ಭಟ ಹೇಗಿದೆಯೆಂದರೆ ಮೃಗಾಲಯದಲ್ಲಿರುವ ಕಾಡು ಪ್ರಾಣಿಗಳಲ್ಲೂ ಸೋಂಕು ದೃಢವಾಗಿದೆ.

ನ್ಯೂಯಾರ್ಕ್: ಅಮೆರಿಕದಲ್ಲಿ ಕೊರೋನಾ ವೈರಸ್ ಆರ್ಭಟ ಹೇಗಿದೆಯೆಂದರೆ ಮೃಗಾಲಯದಲ್ಲಿರುವ ಕಾಡು ಪ್ರಾಣಿಗಳಲ್ಲೂ ಸೋಂಕು ದೃಢವಾಗಿದೆ.

ಹೌದು ನ್ಯೂಯಾರ್ಕ್ ನ ಬ್ರಾಂಕ್ಸ್ ಮೃಗಾಲಯದಲ್ಲಿರುವ 4 ವರ್ಷ ಪ್ರಾಯದ ಒಂದು ಹಿಮಾಲಯನ್ ಹುಲಿಗೆ ಸೋಂಕು ತಗುಲಿದ್ದು, ಇತ್ತೀಚೆಗೆ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಇದು ದೃಢವಾಗಿದೆ. ಅಂತೆಯೇ ಈ ಒಂದು ಹುಲಿ ಮಾತ್ರವಲ್ಲದೇ ಈ ಹುಲಿ ಜೊತೆಗಿದ್ದ ಇತರೆ 6 ಹುಲಿಗಳು  ಹಾಗೂ ಸಿಂಹಗಳೂ ಅನಾರೋಗ್ಯಕ್ಕೆ ತುತ್ತಾಗಿದೆ. ಆ ಮೂಲಕ ಅಮೆರಿಕದಲ್ಲಿ ವೈರಸ್ ಕಾಣಿಸಿಕೊಂಡ ಬಳಿಕ ಮೊದಲ ಬಾರಿಗೆ ಪ್ರಾಣಿಗಳಲ್ಲಿ ವೈರಸ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಅಮೆರಿಕ ಮಾತ್ರವಲ್ಲದೇ ವಿಶ್ವಾದ್ಯಂತ ಕಾಡು ಪ್ರಾಣಿಯಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡ ಮೊದಲ  ಪ್ರಸಂಗ ಇದಾಗಿದೆ.

ಈ ಬಗ್ಗೆ ಮಾತನಾಡಿರುವ ಅಮೆರಿಕದ ಕೃಷಿ ಇಲಾಖೆ ಅಧಿಕಾರಿಗಳು, ಮಾರ್ಚ್ 27ರಂದು ಹುಲಿ ತೀವ್ರ ಜ್ವರಕ್ಕೆ ತುತ್ತಾಗಿತ್ತು. ಅಲ್ಲದೆ ವೈರಸ್ ಸಂಬಂಧಿತ ಲಕ್ಷಣಗಳೂ ಗೋಚರವಾಗುತ್ತಿತ್ತು. ಇದೇ ಕಾರಣಕ್ಕೆ ಹುಲಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿತ್ತು. ಇದೀಗ ಹುಲಿಯಲ್ಲಿ  ಸೋಂಕು ದೃಢಪಟ್ಟಿದ್ದು, ಇತರೆ ಹುಲಿಗಳಿಗೂ ಈ ಸೋಂಕು ತಗುಲಿರುವ ಶಂಕೆ ಇದೆ. ಹೀಗಾಗಿ ಎಲ್ಲ ಹುಲಿಗಳನ್ನೂ ಪ್ರತ್ಯೇಕವಾಗಿರಿಸಲಾಗಿದ್ದು, ಇತರೆ ಹುಲಿಗಳನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗುತ್ತಿದೆ.

ಇನ್ನು ಮೃಗಾಲಯಕ್ಕೆ ಬರುವ ಜನರಿಂದ ಹುಲಿಗಳಿದೆ ಸೋಂಕು ತಗುಲಿರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು ಮಾರ್ಚ್ 16ರಿಂದಲೇ ಮೃಗಾಲಯವನ್ನು ಮುಚ್ಚಲಾಗಿದ್ದು, ಯಾವುದೇ ರೀತಿಯ ಸಾರ್ವಜನಿಕ ಪ್ರವೇಶಕ್ಕೆ ಅನುಮತಿ ನೀಡುತ್ತಿಲ್ಲ. ಹೀಗಾಗಿ ಬಹುಶಃ  ಮೃಗಾಲಯದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡು ಅವರಿಂದ ಹುಲಿಗೂ ಹಬ್ಬಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇನ್ನು ಪ್ರಾಣಿಗಳಿಂದಲೂ ಸೋಂಕು ಪ್ರಸರಣವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮೃಗಾಲಯದ ವೈದ್ಯಾಧಿಕಾರಿ ಡಾ.ಜೇನ್ ರೂನಿ  ಅವರು, ಈ ವರೆಗೂ ಅಮೆರಿಕದಲ್ಲಿ ಪ್ರಾಣಿಗಳಲ್ಲಿ ಅಥವಾ ಪ್ರಾಣಿಗಳಿಂದ ಸೋಂಕು ಹರಡಿರುವ ಪ್ರಕರಣಗಳು ದಾಖಲಾಗಿಲ್ಲ. ನಾವು ಕಂಡಂತೆ ಸೋಂಕು ವ್ಯಕ್ತಿಯಿಂದ ವ್ಯಕ್ತಿಯಿಂದ ಹರಡುತ್ತಿದೆ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಸಂಶೋಧನೆ ನಡೆಸುತ್ತಿರುವ ಹಾಂಕಾಂಗ್ ವಿಜ್ಞಾನಿಗಳು ಮನೆಯಲ್ಲಿ ಸಾಕುವ ಪ್ರಾಣಿಗಳಾದ ನಾಯಿ ಮತ್ತು ಬೆಕ್ಕುಗಳು ವೈರಸ್ ಅನ್ನು ವ್ಯಕ್ತಿಗಳಿಗೆ ಹರಡುವುದಿಲ್ಲ. ಆದರೆ ಈ ಪ್ರಾಣಿಗಳ ಮಾಲೀಕರು ಪ್ರಾಣಿಗಳೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಾಗ ಅಂದರೆ  ತಬ್ಬಿಕೊಂಡಾಗ, ಮುತ್ತು ನೀಡಿದಾಗ, ಸ್ನಾನ ಮಾಡಿಸುವಾಗ ಅದರ ಜೊಲ್ಲು ಮೈಮೇಲೆ ಬಿದ್ದರೆ ಆಗ ವೈರಸ್ ವ್ಯಕ್ತಿಗೆ ಹರಡುವ ಸಾಧ್ಯತೆ ಗಳಿರುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video