ಬೀಜಿಂಗ್: ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ 99 ಹೊಸ ಕರೋನವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ 97 ಮಂದಿ ವಿದೇಶದಿಂದ ಬಂದವರಾಗಿದ್ದಾರೆ ಎಂದು ದೇಶದ ರಾಷ್ಟ್ರೀಯ ಆರೋಗ್ಯ ಆಯೋಗ ಭಾನುವಾರ ತಿಳಿಸಿದೆ.
ಶನಿವಾರ ಚೀನಾದಲ್ಲಿ 46 ಹೊಸ ಕರೋನವೈರಸ್ ಪ್ರಕರಣಗಳು (ಈ ಪೈಕಿ 42 ಮಂದಿ ವಿದೇಶದಿಂದ ಬಂದವರು) ಮತ್ತು 3 ಹೊಸ ಸಾವುಗಳು ಸಂಭವಿಸಿವೆ. ಕಳೆದ 24 ಗಂಟೆಗಳಲ್ಲಿ ಕೊವಿದ್-19 ನಿಂದ ಯಾವುದೇ ಹೊಸ ಸಾವುಗಳು ವರದಿಯಾಗಿಲ್ಲ ಎಂದು ಚೀನಾದ ಆರೋಗ್ಯ ಆಯೋಗ ಭಾನುವಾರ ತಿಳಿಸಿದೆ.
ಚೀನಾದ ಮುಖ್ಯ ಭೂಭಾಗದಲ್ಲಿ 1,130 ಕ್ಕೂ ಹೆಚ್ಚು ಜನರು ಕೊವಿದ್-19 ಗೆ ಚಿಕಿತ್ಸೆ ಪಡೆಯುತ್ತಿದ್ದು, 139 ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ